ಬೆಂಗಳೂರು : ನಟ, ನಿರ್ದೇಶಕ ದುನಿಯಾ ವಿಜಯ್ ನಿರ್ದೇಶನದ ಸಿಟಿ ಲೈಟ್ಸ್ ಸಿನಿಮಾದ ಪೋಸ್ಟ್ ರಿವೀಲ್ ಆಗಿದ್ದು. ನಟ ವಿಜಯ್ ಪುತ್ರಿ ಮೋನಿಷಾ ಮತ್ತು ವಿನಯ್ ರಾಜ್ಕುಮಾರ್ ಲುಕ್ ಅನಾವರಣವಾಗಿದೆ. ಈ ಕುರಿತು ನಟ ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ :ಆಸ್ತಿ ವಿವಾದ: ಸ್ವಂತ ತಾತನಿಗೆ 70 ಬಾರಿ ಚಾಕುವಿನಿಂದ ಇರಿದು ಕೊಂದ ಮೊಮ್ಮಗ
ಸದ್ಯ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ವಿನಯ್ ಮತ್ತು ಮೋನಿಷಾ ತಲೆಯ ಮೇಲೆ ದೇವಿಯನ್ನು ಇಟ್ಟುಕೊಂಡು ಚಾಟಿ ಏಟು ಹೊಡೆದುಕೊಂಡು ಓಡಾಡುತ್ತಿರುವ ಲುಕ್ ಅನಾವರಣ ಆಗಿದೆ. ಸದ್ಯ ದುನಿಯಾ ವಿಜಯ್ ಅವರು ಮಗಳು ಮೋನಿಷಾ ಮತ್ತು ವಿನಯ್ ಮೂಲಕ ಹೇಳಲು ಹೊರಟಿರುವ ಕಥೆ, ವಿಭಿನ್ನವಾಗಿರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಿಗಿದೆ. ಚಿತ್ರದ ಪೋಸ್ಟರ್ ಲುಕ್‌ನಿಂದ ನಿರೀಕ್ಷೆ ದುಪ್ಪಟ್ಟಾಗಿದೆ.