ಬೆಂಗಳೂರು : ಏರೋ ಇಂಡಿಯಾ -2025ನ್ನು ಉದ್ಘಾಟಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ‘ಭಾರತ ಇಂದು ಮಹಾಕುಂಭಮೇಳವನ್ನು ಆಚರಿಸುತ್ತಿದೆ, ಮತ್ತೊಂದೆಡೆ ಏರೋ ಇಂಡಿಯಾ -2025 ಆಚರಿಸುತ್ತಿದೆ. ಇವೆರಡು ಅನುಸಂಧಾನವಾಗಿದೆ ಎಂದು ಹೇಳಿದರು.
ಪ್ರಯಾಗ್ನಲ್ಲಿ ನಡೆಯುತ್ತಿರುವ ಕುಂಭಮೇಳ ಮತ್ತು ಬೆಂಗಳೂರು ಏರ್ ಶೋಗಳೆರಡನ್ನು ಸಂಯೋಜಿಸಿ ಮಾತನಾಡಿದ ರಾಜ್ನಾಥ್ ಸಿಂಗ್ ‘ಏರ್ ಶೋ ಏರೋ ಇಂಡಿಯಾದ ಮಹಾಕುಂಭವಾಗಿದೆ, ಪ್ರಯಾಗ್ರಾಜ್ಮಹಾಕುಂಭ ಸಂಸ್ಕೃತಿಯ ಮಹಾಕುಂಭವಾಗಿದ್ರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋ ಶಕ್ತಿಯ ಮಹಾಕುಂಭವಾಗಿದೆ, ಇದು ಪರಾಕ್ರಮ ಹಾಗೂ ಆಯುಧದ ಮಹಾಕುಂಭವಾಗಿದೆ.
ರನ್ ವೇ ಟು ಬಿಲಿಯನ್ ಅಪಾರ್ಚುನಿಟೀಸ್ ಎಂಬ ಧ್ಯೇಯದೊಂದಿಗೆ ಏರ್ ಶೋ ನಡೆಯುತ್ತಿದೆ. ಇದು ರಾಷ್ಟ್ರದ ನೂರು ಕೋಟಿ ಜನರಿಗೆ ಕೋಟ್ಯಾಂತರ ಅವಕಾಶಗಳನ್ನು ಸೃಷ್ಟಿಸುವ ವೇದಿಕೆಯಾಗಿದೆ. ವಾಯುಸೇನೆ ಅನೇಕ ಗುರಿಗಳನ್ನು ಇಟ್ಟುಕೊಂಡಿದೆ. ಅದರ ಗುರಿ ಶೌರ್ಯ ಪರಾಕ್ರಮವನ್ನು ಮಾತ್ರ ತೋರಿಸುವುದಲ್ಲದೆ,
ಟೆಕ್ನಾಲಜಿಯನ್ನು ವಿಶ್ವಕ್ಕೆ ಪರಿಚಯಿಸುವುದಾಗಿದೆ.
ಇದನ್ನೂ ಓದಿ :ಮದುವೆಯಾಗಲು ನಿರಾಕರಿಸಿದ ಪ್ರೇಯಸಿ: ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪ್ರಿಯಕರ
ಇವತ್ತು ಅನೇಕ ರಕ್ಷಣಾ ಮಂತ್ರಿಗಳು, ವಿಜ್ಞಾನಿಗಳು, ಹೂಡಿಕೆದಾರರು ಸೇರಿದಂತೆ ಎಲ್ಲರ ಸಂಗಮವಾಗಿದೆ, ನಮ್ಮ ಯಶಸ್ಸು ಇಂದು ಉನ್ನತ ಮಟ್ಟಕ್ಕೆ ತಲುಪುತ್ತಿದೆ. ಇಂತಹ ಸಮ್ಮೇಳನಗಳು ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸಲು ಪ್ರಮುಖ ಪಾತ್ರ ವಹಿಸಿದೆ. ಒಂದು ಜಗತ್ತು, ಒಂದು ಕುಟುಂಬ ಅನ್ನುವ ಪರಿಕಲ್ಪನೆಯಲ್ಲಿ ಕೆಲಸ ಮಾಡಲು ಇದು ಸಹಕಾರಿಯಾಗಿದೆ. ದೇಶ ದೇಶಗಳ ನಡುವೆ ಸಂಬಂಧಗಳನ್ನು ಸುಧಾರಿಸಲು ಇದು ಪ್ರಮುಖ ವೇದಿಕೆಯಾಗಿದೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ರಾಜ್ನಾಥ್ ಸಿಂಗ್ ‘ ಜಗತ್ತು ಒಂದು ಶಾಂತಿಯ ವಟವೃಕ್ಷ, ಎಲ್ಲರೂ ಜೊತೆಗೆ ಕೆಲಸ ಮಾಡೋಣ, ಇಂದು ಶಾಂತಿ, ಸಮೃದ್ಧಿಯ ಸ್ಪಷ್ಟ ಚಿತ್ರಣ ಸಿಗುತ್ತಿದೆ. ಭಾರತದ ಮೇಲೆ ಅನೇಕ ಆಕ್ರಮಣಗಳು ನಡೆದಿದೆ, ಆದರೆ ಇಂದಿಗೂ ಭಾರತೀಯ ಸೇನೆ ಆದರ್ಶಗಳನ್ನು ಪಾಲಿಸಿಕೊಂಡು ಬಂದಿದ್ದೇವೆ. ಈ ಏರ್ ಶೋಗೆ ದೇಶ ವಿದೇಶಗಳ ಹಿರಿಯ ಏರ್ಫೋರ್ಸ್ ಅಧಿಕಾರಿಗಳು ಬಂದಿದ್ದೀರಿ, ಜಗತ್ತಿನ ಶಾಂತಿ ಸ್ಥಾಪನೆಗಾಗಿ ನಾವೆಲ್ಲಾ ಮುಕ್ತವಾಗಿ ಸೇರುವ ಅಗತ್ಯವಿದೆ. ಭಾರತೀಯ ವಾಯುಸೇನೆ ವಿನೂತನ ಪ್ರಯೋಗಗಳಿಗೆ ಸಾಕ್ಷಿಯಾಗುತ್ತಿದೆ.
ಇದನ್ನೂ ಓದಿ :ಪ್ಯಾರಾಚೂಟ್ ಯಡವಟ್ಟು:13 ಸಾವಿರ ಅಡಿ ಮೇಲಿಂದ ಬಿದ್ದು ಏರ್ಪೋರ್ಸ್ ಅಧಿಕಾರಿ ಸಾ*ವು !
ಇಂದು ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ನಾವು ಭವಿಷ್ಯದ ಪಥವನ್ನು ಹಾಕಿದ್ದೇವೆ. ಹತ್ತು ವರ್ಷದಲ್ಲಿ ಮೂಲಭೂತ ಸೌಕರ್ಯ, ಕೃಷಿ, ಕೈಗಾರಿಕೆಗಳ ಜೊತೆ ರಕ್ಷಣಾ ವಲಯಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಬಜೆಟ್ನಲ್ಲಿ ರಕ್ಷಣಾ ವಲಯದಲ್ಲಿ ಪ್ರಮುಖ ಸ್ಥಾನ ಕೊಟ್ಟಿದ್ದೇವೆ. ಇಲ್ಲಿಯವರೆಗೆ ರಕ್ಷಣಾವಲಯವನ್ನು ಬಜೆಟ್ ನಲ್ಲಿ ಕಡೆಗಣಿಸಲಾಗುತ್ತಿತ್ತು. 2025-2026ರಲ್ಲಿ ನಾವು ಮೀಸಲಿಟ್ಟ ಹಣ ಈವರೆಗಿನ ಬಜೆಟ್ಗಿಂತ 9.53% ಅಧಿಕ ಎಂದು ಮೋದಿ ಸರ್ಕಾರ ರಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಆದ್ಯತೆಯ ಬಗ್ಗೆ ಮಾತನಾಡಿದರು.