Saturday, February 8, 2025

ಮುಸ್ಲೀಂ ಪ್ರಾಬಲ್ಯವಿದ್ದ ಕ್ಷೇತ್ರದಲ್ಲೂ ಬಿಜೆಪಿಗೆ ಭರ್ಜರಿ ಗೆಲುವು

ನವದೆಹಲಿ: ದೆಹಲಿ ಚುನಾವಣೆಯಲ್ಲಿ ಮುಸ್ಲಿಮ್‌ ಬಾಹುಳ್ಯ ಇರುವ ಮುಸ್ತಫಾಬಾದ್​  ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿದೆ. ಬಿಜೆಪಿಯ ಅಭ್ಯರ್ಥಿ ಮೋಹನ್​ ಸಿಂಗ್​ ಬಿಶ್ತ್​ 17,578 ಮತಗಳಿಂದಿಂದ ಆಪ್‌ನ ಅದೀಲ್‌ ಅಹ್ಮದ್‌ ಖಾನ್‌ ವಿರುದ್ಧ ಜಯಗಳಿಸಿದ್ದಾರೆ. ಬಿಜೆಪಿಯ ಮೋಹನ್‌ ಸಿಂಗ್‌ ಬಿಶ್ತ್ 85,2015 ಮತಗಳನ್ನು ಪಡೆದರೆ ಆಪ್‌ನ ಅದೀಲ್‌ ಅಹ್ಮದ್‌ ಖಾನ್‌ 67,637 ಮತಗಳನ್ನು ಪಡೆದಿದ್ದಾರೆ.

ಮಾಜಿ ಕೌನ್ಸಿಲರ್ ಮತ್ತು 2020 ರ ದೆಹಲಿ ಗಲಭೆ ಆರೋಪಿಯಾ ಅಸಾದುದ್ದೀನ್‌ ಓವೈಸಿಯ ಎಐಎಂಐಎಂ ಟಿಕೆಟ್‌ ನೀಡಿತ್ತು. ತಾಹಿರ್ ಹುಸೇನ್‌ 33,474 ಮತಗಳನ್ನು ಪಡೆದಿದ್ದಾರೆ. ಮುಸ್ತಫಾಬಾದ್ ಕ್ಷೇತ್ರದಲ್ಲಿ 39.5% ಮುಸ್ಲಿಮ್‌ ಮತದಾರರಿದ್ದಾರೆ. ಅದೀಲ್‌ ಅಹ್ಮದ್‌ ಖಾನ್‌ ಮತ್ತು ತಾಹಿರ್ ಹುಸೇನ್‌ ಮಧ್ಯೆ ಮತಗಳು ಹಂಚಿ ಹೋಗಿದ್ದರಿಂದ ಮೋಹನ್‌ ಸಿಂಗ್‌ ಬಿಶ್ತ್ ಜಯಗಳಿಸಿದ್ದಾರೆ.

ಇದನ್ನೂ ಓದಿ :17 ಬಡ ಕುಟುಂಬದ ಜೋಡಿಗಳಿಗೆ ಮದುವೆ ಮಾಡಿಸಿ ಮಾದರಿಯಾದ ಮಂಗಳಮುಖಿ !

ಮೋಹನ್​ ಸಿಂಗ್​ 1998ರಿಂದಲೂ ಕರವಾಲ್​ ನಗರದ ಶಾಸಕರಾಗಿದ್ದಾರೆ. ಆದರೆ ಕಳೆದ 2015ರ ಚುನಾವಣೆಯಲ್ಲಿ ಎಎಪಿಯ ಕಪಿಲ್​ ಮಿಶ್ರಾ ವಿರುದ್ದ ಸೋತಿದ್ದರು. ಆದರೆ 2020ರಲ್ಲಿ ಮತ್ತೆ ಕರವಾಲ್​ ನಗರದಿಂದ ಗೆದ್ದು ಶಾಸಕರಾಗಿದ್ದರು. ಆದರೆ ಬಾರಿ ಈ ಕ್ಷೇತ್ರದಿಂದ ಟಿಕೆಟ್​ ಕೈ ತಪ್ಪಿದ ಕಾರಣ ಮುಸ್ತಫಾಬಾದ್​ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು.

ಶೇಕಡಾ 40ರಷ್ಟು ಮುಸ್ಲಿಂ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಬಹುತೇಕ ಆಪ್​ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಇಬ್ಬರು ಮುಸ್ಲಿಂ ಅಭ್ಯರ್ಥಿಗಳ ನಡುವ ಮತಗಳು ಹಂಚಿಹೋದ ಹಿನ್ನಲೆ ಬಿಜೆಪಿ ಅಭ್ಯರ್ಥಿ ಗೆದ್ದು ಬೀಗಿದ್ದಾರೆ.

 

RELATED ARTICLES

Related Articles

TRENDING ARTICLES