ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾಹಜಾರೆ ಮಾತನಾಡಿದ್ದು , ಅರವಿಂದ್ ಕೇಜ್ರಿವಾಲ್ ಮತ್ತು ಅವರ ನಾಯಕತ್ವದ ಬಗ್ಗೆ ಕಟುವಾದ ಟೀಕೆ ಮಾಡಿದ್ದಾರೆ.
ಕೇಜ್ರಿವಾಲ್ ಅಧಃಪತನದ ಬಗ್ಗೆ ಮಾತನಾಡಿರುವ ಅಣ್ಣ ಹಜಾರೆ ‘ಚುನಾವಣೆಯ ಸಮಯದಲ್ಲಿ ಅಭ್ಯರ್ಥಿಯ ನಡವಳಿಕೆ, ಆಲೋಚನೆಗಳು ಮತ್ತು ಜೀವನವು ಶುದ್ಧವಾಗಿರಬೇಕು, ದೋಷರಹಿತವಾಗಿರಬೇಕು ಮತ್ತು ತ್ಯಾಗದಿಂದ ತುಂಬಿರಬೇಕು ಎಂದು ನಾನು ಯಾವಾಗಲೂ ಹೇಳಿದ್ದೇನೆ. ಈ ಗುಣಗಳು ಮತದಾರರು ಅವರ ಮೇಲೆ ನಂಬಿಕೆ ಇಡಲು ಸಹಾಯ ಮಾಡುತ್ತದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :ವಿಡಿಯೋ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನಟ ದರ್ಶನ್
“ನಾನು ಇದನ್ನು ಅರವಿಂದ್ ಕೇಜ್ರಿವಾಲ್ ಅವರಿಗೆ ಹೇಳಿದೆ, ಆದರೆ ಅವರು ಗಮನ ಹರಿಸಲಿಲ್ಲ. ಅವರು ಅಂತಿಮವಾಗಿ ಅವರ ಗಮನವನ್ನು ಮದ್ಯದ ಮೇಲೆ ಕೇಂದ್ರೀಕರಿಸಿದರು. ಈ ಸಮಸ್ಯೆ ಏಕೆ ಉದ್ಭವಿಸಿತು? ಅವರು ಹಣದ ಬಲದಿಂದ ಮುಳುಗಿಹೋದರು” ಎಂದು ದೆಹಲಿ ಮದ್ಯ ನೀತಿಯ ಸುತ್ತಲಿನ ವಿವಾದಗಳನ್ನು ಉಲ್ಲೇಖಿಸುತ್ತಾ ಹಜಾರೆ ಟೀಕಿಸಿದರು.
ಯಾವ ಭ್ರಷ್ಟಚಾರ ವಿರೋಧಿ ಅಭಿಯಾನದಲ್ಲಿ ಅಣ್ಣ ಹಜಾರೆ ಜೊತೆ ಗುರುತಿಸಿಕೊಂಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಅರವಿಂದ್ ಕೇಜ್ರಿವಾಲ್. ಇಂದು ಅವರಿಂದಲೇ ಟೀಕೆಗೆ ಒಳಗಾಗಿರುವುದು ನಿಜಕ್ಕೂ ಅಘಾತಕಾರಿ ಸಂಗತಿಯಾಗಿದೆ.