Friday, February 7, 2025

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಂತೋಷ್ ಲಾಡ್​

ಬಾಗಲಕೋಟೆ : ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ವ್ಯಕ್ತಿಯನ್ನು ಸಚಿವ ಸಂತೋಶ್​ ಲಾಡ್​ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆಯ ಮುಧೋಳ ತಾಲೂಕಿನ, ಕೇಶವ್ ಸಿಮೆಂಟ್ ಕಾರ್ಖಾನೆ ಬಳಿ ನಡೆದ ಘಟನೆ ನಡೆದಿದ್ದು. ರಸ್ತೆಯಲ್ಲಿದ್ದ ರೋಡ್​ ಹಂಪ್ಸ್​​ ಬಳಿ ಬೈಕ್ ಸ್ಕಿಡ್ ಆಗಿ ಸತೀಶ್ ವೆಂಕಪ್ಪ ಮಾದರ ಎಂಬ ವ್ಯಕ್ತಿ ಕೆಳಗೆ ಬಿದ್ದು ಗಾಯಗೊಂಡಿದ್ದನು. ಇದೀ ಸಮಯಕ್ಕೆ ಸಚಿವ ಸಂತೋಶ್​ ಲಾಡ್​ ಇದೇ ಮಾರ್ಗವಾಗಿ ಬಂದಿದ್ದು. ಬೈಕ್​ ಸವಾರ ರಸ್ತೆಯಲ್ಲಿ ನರಳುತ್ತಿರುವುದನ್ನು ನೋಡಿ ಸಹಾಯಕ್ಕ ಧಾವಿಸಿದ್ದಾರೆ.

ಇದನ್ನೂ ಓದಿ:ಅಂಬೆಗಾಲಿಡುತ್ತಲೆ ವಿಶ್ವದಾಖಲೆ ನಿರ್ಮಿಸಿದ ಕಂದಮ್ಮ: ಅಭಿನಂದನೆ ಸಲ್ಲಿಸಿದ ಸಿಎಂ

ಅಪಘಾತದಲ್ಲಿ ಗಾಯಗೊಂಡಿದ್ದ ಸವಾರನನ್ನು ಸಚಿವರು ತಮ್ಮ ಕಾರಿನಲ್ಲೆ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಲೋಕಾಪುರ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಸಚಿವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES