ಪಂಜಾಬ್: ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ. ಲುಧಿಯಾನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಮಣಪ್ರೀತ್ ಕೌರ್ ಅವರು ವಾರಂಟ್ ಹೊರಡಿಸಿದ್ದಾರೆ. ರಿಜಿಕಾ ನಾಣ್ಯ ಕಂಪನಿಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಈ ಬಂಧನ ವಾರೆಂಟ್ ಜಾರಿಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಸಿಎಂ ನಿರಪರಾಧಿ ಎಂದು ಆದೇಶ ನೀಡಿಲ್ಲ: ಬಿ.ವೈ ವಿಜಯೇಂದ್ರ
ವಂಚನೆ ಪ್ರಕರಣದಲ್ಲಿ ಸೋನು ಸೂದ್ಗೆ ವಿಚಾರಣೆಗೆ ಹಾಜರಾಗುವಂತೆ ಪಂಜಾಬ್ನ ಲುಧಿಯಾ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು. ಆದರೆ ನಟ ನ್ಯಾಯಾಲಯದ ಮುಂದೆ ಹಾಜರಾಗುವಲ್ಲಿ ವಿಫಲರಾದ ಕಾರಣ ಸೋನು ಸೂದ್ ಹೆಸರಲ್ಲಿ ಬಂಧನ ವಾರೆಂಟ್ ಹೊರಡಿಸಿದ್ದು. ಈ ಪ್ರಕರಣದ ವಿಚಾರಣೆಯನ್ನು ಮುಂದಿನ ಫೆಬ್ರವರಿ 10ನೇ ತಾರಿಖಿಗೆ ಮುಂದೂಡಲಾಗಿದೆ ಎಂದು ಮಾಹಿತಿ ದೊರೆತಿದೆ.