Wednesday, February 5, 2025

ಅಮೇರಿಕಾ ಸೇನಾ ವಿಮಾನದಲ್ಲಿ ಅಮೃತಸರಕ್ಕೆ ಬಂದಿಳಿದ ಅಕ್ರಮ ಭಾರತೀಯ ವಲಸಿಗರು !

ದೆಹಲಿ: ಅಮೇರಿಕಾದಲ್ಲಿ ಅಕ್ರಮವಾಗಿ ನೆಲೆಸಿದ್ದ 104 ಅಕ್ರಮ ಭಾರತೀಯ ವಲಸಿಗರನ್ನು ಅಮೇರಿಕಾ ದೇಶದಿಂದ ಹೊರ ಹಾಕಿದ್ದು. ಇದೀಗ ಅಕ್ರಮ ವಲಸಿಗರನ್ನು ಹೊತ್ತ ಅಮೇರಿಕಾದ ವಾಯುಪಡೆ ವಿಮಾನ ಅಮೃತಸರಕ್ಕೆ ಬಂದಿಳಿದಿದೆ.

ಹೌದು.. ಅಮೇರಿಕಾದಲ್ಲಿ ಡೊನಾಲ್ಡ್​ ಟ್ರಂಪ್​ ಅಧಿಕಾರ ವಹಿಸಿಕೊಂಡ ನಂತರ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ದೇಶದಿಂದ ಹೊರ ಹಾಕಲು ಕ್ರಮ ಕೈಗೊಂಡಿದ್ದು. ಅಮೇರಿಕಾದ ಸೇನೆಯನ್ನು ಬಳಸಿಕೊಂಡು ಅಕ್ರಮ ವಲಸಿಗರನ್ನು ಹೊರ ಹಾಕಲಾಗುತ್ತಿದೆ. ಮೆಕ್ಸಿಕೋ, ಕೆನಾಡ, ಭಾರತ ಎಲ್ಲಾ ದೇಶದ ಅಕ್ರಮ ವಲಸಿಗರನ್ನು ದೇಶದಿಂದ ಹೊರಗೆ ಹಾಕಲಾಗುತ್ತಿದೆ.

ಇದನ್ನೂ ಓದಿ :ಗಂಡನ ಮೇಲಿನ ದ್ವೇಷಕ್ಕೆ ಮಗುವಿಗೆ ಬರೆ ಎಳೆದ ತಾಯಿ !

ಈ ಯೋಜೆನೆಯ ಭಾಗವಾಗಿ 104 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕ ಮಿಲಿಟರಿ ವಿಮಾನ ಬುಧವಾರ ಮಧ್ಯಾಹ್ನ ಅಮೃತಸರದ ಶ್ರೀ ಗುರು ರಾಮ್​ದಾಸ್ ಜೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಪಂಜಾಬ್​ನ 30, ಹರಿಯಾಣ ಮತ್ತು ಗುಜರಾತ್‌ನ 33 ಹಾಗೂ ಮಹರಾಷ್ಟ್ರ ಮತ್ತು ಉತ್ತರ ಪ್ರದೇಶದ ತಲಾ ಇಬ್ಬರ ಈ ವಿಮಾನದಲ್ಲಿ ಭಾರತಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES