Wednesday, February 5, 2025

ಗಂಡನ ಮೇಲಿನ ದ್ವೇಷಕ್ಕೆ ಮಗುವಿಗೆ ಬರೆ ಎಳೆದ ತಾಯಿ !

ಚಿತ್ರದುರ್ಗ : ಗಂಡನ ಮೇಲಿನ ದ್ವೇಶಕ್ಕೆ ಕ್ರೂರ ತಾಯಿಯೊಬ್ಬಳು 7 ವರ್ಷದ ತನ್ನ ಮಗುವಿಗೆ ಬರೆ ಹಾಕಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದ್ದು. ಸ್ವಂತ ಮಗುವಿಗೆ ಚಿತ್ರಹಿಂಸೆ ನೀಡಿ ತಾಯಿಯನ್ನು ಉಮ್ಮೇಸಲ್ಮಾ ಎಂದು ಗುರುತಿಸಲಾಗಿದೆ.

ಚಿತ್ರದುರ್ಗದ ಕವಾಡಿಗರಹಟ್ಟಿ ಆಶ್ರಯ ಬಡಾವಣೆಯಲ್ಲಿ ಘಟನೆ ನಡೆದಿದ್ದು. ಕಳೆದ 10ವರ್ಷಗಳ‌ ಹಿಂದೆ ಪ್ರೀತಿಸಿ  ಮದುವೆಯಾಗಿದ್ದ ಉಮ್ಮೇಸಲ್ಮಾ-ಅನಿಲ್​ಗೆ ಒಬ್ಬ ಮಗನು ಇದ್ದನು. ಆದರೆ ಕಳೆದ ಎರಡು ವರ್ಷಗಳ ಹಿಂದೆ ತಲಾಖ್​ ಪಡೆದು ಇಬ್ಬರು ದೂರ ಆಗಿದ್ದರು. ಆದರೆ ಮಗು ತನ್ನ ತಂದೆಯೊಂದಿಗೆ ಮಾತನಾಡುವುದನ್ನು ಸಹಿಸದ ಕ್ರೂರ ತಾಯಿ ಮಗುವಿನ ಕೈ ಕಾಲುಗಳಿಗೆ ಬರೆ ಎಳೆದಿದ್ದಾಳೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಮೋದಿ ಪ್ರತಿಯೊಬ್ಬನ ತಲೆ ಮೇಲೆ 1 ಲಕ್ಷ ಸಾಲ ಹೊರಿಸಿದ್ದಾರೆ: ಸಂತೋಶ್​ ಲಾಡ್​

ಅಜ್ಜಿ ಮನೆಗೆ ಹೋಗದಂತೆ, ತಂದೆ ಜೊತೆ ಮಾತನಾಡದಂತೆ ಬಾಲಕನಿಗೆ ಕಿರುಕುಳ ನೀಡಿದ್ದು. ಮಗುವಿಗೆ ಊಟ ಕೊಡದೇ, ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಇದೀಗ ಸೊಸೆ ವಿರುದ್ದ ಮಗುವಿನ ಅಜ್ಜಿ ಶಮಶಾದ್ ಕೋಟೆ ಪೊಲೀಸ್​ ಠಾಣೆ​ ಮೆಟ್ಟಿಲೇರಿದ್ದು, ಮಗು ತಮಗೆ ಬೇಕು ಅಂತಾ ಪೊಲೀಸ್ ಠಾಣೆಯ ಮುಂದೆಯೇ ಎರಡೂ ಕುಟುಂಬಗಳ ವಾಗ್ವಾದ ಮಾಡಿವೆ. ಇನ್ನು ಮಗುವಿನ ಅಜ್ಜಿ ಶಮಶಾದ್​ ಮಾಧ್ಯಮದ ಮುಂದೆ ಮಗುವನ್ನು ತಮಗೆ ನೀಡಿ ಅಂಗಲಾಚಿ ಬೇಡಿಕೊಂಡಿದ್ದಾರೆ.

ಬಾಲಕನಿಗೆ ಮಕ್ಕಳ ರಕ್ಷಣಾ ಘಟಕದಲ್ಲಿ ಕೌನ್ಸಲಿಂಗ್ ನಡೆಸಿದ್ದು. ಕೌನ್ಸಲಿಂಗ್ ಬಳಿಕ ಮಗುವನ್ನ ಅಜ್ಜಿ ಬಳಿಗೆ  ಕಳುಹಿಸಲಾಗಿದೆ. ಅಜ್ಜಿ ಶಮಶಾದ್​​ಗೆ ಕರವೆ ಹೋರಾಟಗಾರರು ಬೆಂಬಲ ನೀಡಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES