Wednesday, February 5, 2025

ಅಕ್ರಮ ಸಂಬಂಧದ ಶಂಕೆ: ನಡುರಸ್ತೆಯಲ್ಲೆ ಪತ್ನಿಗೆ ಚಾಕು ಹಾಕಿದ ಪಾಪಿ ಪತಿ

ಆನೇಕಲ್ : ಪತ್ನಿಯ ಶೀಲ ಶಂಕಿಸದ ಪಾಪಿ ಪತಿ ನಡುರಸ್ತೆಯಲ್ಲೆ ಪತ್ನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಅನೇಕಲ್​ನಲ್ಲಿ ನಡೆದಿದ್ದು. ಕೊಲೆಯಾದ ದುರ್ದೈವಿಯನ್ನು 29 ವರ್ಷದ ಶ್ರೀಗಂಗಾ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಮೋಹನ್​ ರಾಜು ಎಂದು ಗುರುತಿಸಲಾಗಿದೆ.

ಅನೇಕಲ್​ ತಾಲ್ಲೂಕಿನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ಘಟನೆ ನಡೆದಿದ್ದು. ಮಗುವನ್ನು ಶಾಲೆಗೆ ಬಿಡಲು ಬಂದಿದ್ದ ಪತ್ನಿ ಮೇಲೆ ಪತಿ ಅಟ್ಯಾಕ್​ ಮಾಡಿದ್ದು, ಚಾಕುವಿನಿಂದ ಹಿರಿದು ಕೊಲೆ ಮಾಡಿದ್ದಾನೆ. ಶ್ರೀ ಗಂಗಾ ಮತ್ತು ಮೋಹನ್​ ರಾಜು ಕಳೆದ 7 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಬ್ಬರಿಗೆ 6 ವರ್ಷದ ಮಗನೂ ಇದ್ದಾನೆ. ಆದರೆ ಮೋಹನ್​ ರಾಜುಗೆ ಕಳೆದ ಎರಡ್ಮೂರು ವರ್ಷಗಳಿಂದ ಪತ್ನಿಯ ಶೀಲ ಶಂಕಿಸಿ ಜಗಳ ಮಾಡುತ್ತಿದ್ದನು.

ಇದನ್ನೂ ಓದಿ:ವಿಜಯೇಂದ್ರನ ವಿರುದ್ದ ತನಿಖೆ ಮಾಡಲು ಸಿದ್ದರಾಮಯ್ಯಗೆ ಏನ್​ ದಾಡಿ: ಯತ್ನಾಳ್​

ಮೋಹನ್​ ರಾಜು ಸ್ನೇಹಿತನೊಂದಿಗೆ ಶ್ರೀ ಗಂಗಾ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಅನೇಕ ಬಾರಿ ಪತಿ ಹೆಂಡತಿಯೊಂದಿಗೆ ಜಗಳ ಮಾಡಿದ್ದನು. ಇದೇ ವಿಚಾರಕ್ಕೆ ಕಳೆದ 8 ತಿಂಗಳಿಂದ ಪತಿ ಪತ್ನಿ ಇಬ್ಬರು ದೂರವಿದ್ದರು. ಆದರೆ ನಿನ್ನೆ ರಾತ್ರಿ ಮಗುವನ್ನು ನೋಡಲು ಎಂದು ಮೋಹನ್​ ರಾಜು ಪತ್ನಿಯ ಮನೆಗೆ ಬಂದಿದ್ದನು. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ.

ಇಂದು ಬೆಳಿಗ್ಗೆ ಶ್ರೀ ಗಂಗಾ ಮಗುವನ್ನು ಬೈಕ್​ನಲ್ಲಿ ಶಾಲೆಗೆ ಬಿಡಲು ಕರೆದುಕೊಂಡು ಬಂದಿದ್ದಳು. ಈ ವೇಳೆ ಕಾದು ಕುಳಿತ್ತಿದ್ದ ಪಾಪಿ ಪತಿ ಶ್ರೀ ಗಂಗಾ ಮೇಲೆ ಅಟ್ಯಾಕ್​ ಮಾಡಿದ್ದು. ನಡುರಸ್ತೆಯಲ್ಲೆ ಪತ್ನಿಯ ಮೇಲೆ ಏಳೆಂಟು ಬಾರಿ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ನಾರಯಣ ಹೆಲ್ತ್​ ಸಿಟಿ ಆಸ್ಪತ್ರೆಗೆ ರವಾನೆ ಮಾಡಿದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಹೆಬ್ಬಗೋಡಿ ಪೊಲೀಸರು ಆರೋಪಿ ಮೋಹನ್​ ರಾಜುರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES