ಬೆಂಗಳೂರು : ನಗರದ ಚಿಕ್ಕಬಾಣಾವರದಲ್ಲಿರುವ ಗಬ್ರು ಹೋಟೆಲ್ನಲ್ಲಿ ಡೆಲಿವರಿ ಬಾಯ್ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಕ್ಕೆ, ಹೋಟೆಲ್ ಸಿಬ್ಬಂದಿಗಳು ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಇದೀಗ ಕನ್ನಡ ಪರ ಹೋರಾಟಗಾರರು ಹಿಂದಿವಾಲಗಳ ಸೊಕ್ಕು ಮುರಿದಿದ್ದು. ಹೋಟೆಲ್ ಬಾಗಿಲು ಮುಚ್ಚಿಸಿ ಕ್ಷಮೆ ಕೇಳುವಂತೆ ಎಚ್ಚರಿಕೆ ನೀಡಿದ್ದಾರೆ.
ಹೌದು.. ನಗರದಲ್ಲಿ ಹಿಂದಿ ಭಾಷಿಕರ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿಯಾಗಿ ಗಬ್ರು ಹೋಟೆಲ್ಗೆ ಆರ್ಡರ್ ಪಡೆಯಲು ಹೋಗಿದ್ದ ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದಕ್ಕೆ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಯುವಕನನ್ನು ಒಳಗೆ ಎಳೆದೊಯ್ದು ಹಲ್ಲೆ ನಡೆಸಿದ್ದರು. ಈ ಘಟನೆ ಭಾರಿ ಸಂಚಲನಕ್ಕೂ ಕಾರಣವಾಗಿತ್ತು.
ಇದನ್ನೂ ಓದಿ :ಅಕ್ರಮ ಸಂಬಂಧ ಬೆಳೆಸುವಂತೆ ಒತ್ತಾಯ: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹ*ತ್ಯೆ
ಇದೀಗ ಹಲ್ಲೆಗೊಳಗಾದ ಯುವಕನ ಜೊತೆ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿ ಹೋಟೆಲ್ ಬಾಗಿಲನ್ನು ಮುಚ್ಚಿಸಿದ್ದು. ಹಲ್ಲೆ ಮಾಡಿದ ಪುಂಡರನ್ನು ಕೆಲಸದಿಂದ ವಜಾಗೊಳಿಸುವಂತೆ ಪ್ರತಿಭಟಸಿದ್ದಾರೆ. ಜೊತೆಗೆ ಹಲ್ಲೆಗೊಳಗಾಗಿರುವ ಯುವಕನ ಬಳಿ ಕ್ಷಮೆ ಕೇಳುವವರೆಗೂ ಹೋಟೆಲ್ ತೆರೆಯದಂತೆ ಎಚ್ಚರಿಕೆ ನೀಡಿದ್ದಾರೆ.