Tuesday, February 4, 2025

ದಕ್ಷಿಣ ಆಫ್ರಿಕಾದಲ್ಲೂ ಸನಾತನದ ಕಂಪು: ಉದ್ಘಾಟನೆಗೊಂಡ ಅತಿ ದೊಡ್ಡ ಹಿಂದೂ ದೇವಾಲಯ

ಜೋಹನ್ಸ್​​ಬರ್ಗ್​ : ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಅತಿದೊಡ್ಡ ಹಿಂದೂ ದೇವಾಲಯ ಮತ್ತು ಸಾಂಸ್ಕೃತಿಕ ಸಂಕೀರ್ಣ ಭಾನುವಾರ ಉದ್ಘಾಟನೆಗೊಂಡಿದೆ. ಈ ಕಾರ್ಯಕ್ರಮದಲ್ಲಿ ನೂರಾರು ಹಿಂದೂ ಭಕ್ತರು ಭಾಗವಹಿಸಿದ್ದು. 92 ವರ್ಷದ ಆಧ್ಯಾತ್ಮಿಕ ನಾಯಕ ಮಹಾಂತ್​ ಸ್ವಾಮಿ ಮಹರಾಜ್​ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ದಕ್ಷಿಣ ಆಫ್ರಿಕಾದ ಜನಸಂಖ್ಯೆಯಲ್ಲಿ ಹಿಂದೂಗಳು ಕೇವಲ ಎರಡು ಪ್ರತಿಶತದಷ್ಟಿದ್ದಾರೆ.

ಈ ಸಂದರ್ಭದಲ್ಲಿ, ದೇವಾಲಯದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಭಾರತದಿಂದ ಆಗಮಿಸಿದ್ದ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ಪಂಗಡದ ಆಧ್ಯಾತ್ಮಿಕ ನಾಯಕ, 92 ವರ್ಷದ ಮಹಾಂತ ಸ್ವಾಮಿ ಮಹಾರಾಜ್ ನೇತೃತ್ವದಲ್ಲಿ ಪವಿತ್ರೀಕರಣ ಸಮಾರಂಭ ನಡೆಸಲಾಯಿತು.

ಇದನ್ನೂ ಓದಿ :ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ: ಡಿ,ಕೆ ಸುರೇಶ್​

ಈ ದೇವಾಲಯವನ್ನು BAPS ದಕ್ಷಿಣ ಗೋಳಾರ್ಧದಲ್ಲಿ ಅತಿ ದೊಡ್ಡ ಹಿಂದೂ ಸಾಂಸ್ಕೃತಿಕ ಸಂಕೀರ್ಣ” ಎಂದು ಬಣ್ಣಿಸಿದೆ. ಇದು ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಉದ್ಘಾಟನೆಗೆ ಪೂರ್ವಸಿದ್ಧತಾ ಕಾರ್ಯವಾಗಿ, ಶನಿವಾರ ಜೋಹಾನ್ಸ್‌ಬರ್ಗ್‌ನಲ್ಲಿ ಭವ್ಯ ನಗರ ಯಾತ್ರೆ ಮೆರವಣಿಗೆ ನಡೆಯಿತು. ಇದು ಭಕ್ತಿಗೀತೆಗಳು, ಸಂಗೀತ, ಮೆರವಣಿಗೆ ಬ್ಯಾಂಡ್‌ಗಳು ಮತ್ತು ನೃತ್ಯಗಳನ್ನು ಒಳಗೊಂಡಿತ್ತು.

RELATED ARTICLES

Related Articles

TRENDING ARTICLES