ಬೆಂಗಳೂರು : ನಿನ್ನೆ (ಫೆ.03) ಮದ್ಯಾಹ್ನ ಯುವತಿಯೊಬ್ಬಳು ಹಾಸ್ಟೆಲ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಇದೀಗ ಈ ಘಟನೆಗೆ ಟ್ವಿಸ್ಟ್ ದೊರೆತಿದ್ದು. ವಿಜಯ್ ಎಂಬ ಯುವಕ ಪ್ರೀತಿ ನಿರಾಕರಿಸದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ತಿಳಿದು ಬಂದಿದ್ದು. ಈ ವಿಷಯವನ್ನು ತಿಳಿದ ಯುವಕನೂ ವಿಷ ಸೇವಿಸಿದ್ದಾನೆ ಎಂದು ಮಾಹಿತಿ ದೊರೆತಿದೆ.
ನಿನ್ನೆ ಮಧ್ಯಾಹ್ನ ಬೆಂಗಳೂರು ವಿಶ್ವವಿದ್ಯಾಲಯ ಲೇಡಿಸ್ ಹಾಸ್ಟೆಲ್ನಲ್ಲಿ ಪಾವನ ಎಂಬ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಯುವತಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಎಂಎ ಮಾಡುತ್ತಿದ್ದಳು. ಇಷ್ಟು ವಿದ್ಯಾವಂತ ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ಪೊಲೀಸರು ತಲೆ ಕೆಡೆಸಿಕೊಂಡಿದ್ದರು. ಆದರೆ ಇದೀಗ ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೀತಿ ಕಾರಣ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸಾ*ವು
ಪಾವನ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಎಂಎ ಓದುತ್ತಿದ್ದಳು. ಆದರೆ ಕೆಲದಿನಗಳಿಂದ ಯುವತಿ ಓರ್ವ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಶಯವನ್ನು ಯುವಕನ ಬಳಿಯೂ ಪ್ರಸ್ತಾಪಿಸಿದ್ದಳು. ಆದರೆ ಯುವಕ ಪಾವನಾಳ ಪ್ರೀತಿಯನ್ನು ಬೇಡ ಎಂದಿದ್ದನು. ಹೀಗಾಗಿ ಕಳೆದ ಕೆಲದಿನಗಳಿಂದ ಯುವತಿ ಮಾನಸಿಕವಾಗಿ ನೊಂದಿದ್ದಳು. ಹೀಗಾಗಿ ಯುವತಿ ನಿನ್ನೆ ಹಾಸ್ಟೆಲ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದು ಇದರಲ್ಲಿ ಇಬ್ಬರ ಹೆಸರನ್ನು ಬರೆದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಶಯವನ್ನು ತಿಳಿದ ಯುವಕ ವಿಜಯ್ ಕೂಡ ನಿನ್ನೆ ರಾತ್ರಿ 9:30 ಸುಮಾರಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು. ತಕ್ಷಣ ಆತನನ್ನು ನಾಗರಬಾವಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ವಿಜಯ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದು ಬಂದಿದೆ. ಪಾವನ ಮತ್ತು ವಿಜಯ್ ಇಬ್ಬರು ಇಂದೆ ಕ್ಲಾಸ್ನಲ್ಲಿ ಓದುತ್ತಿದ್ದರು. ಪೊಲೀಸ್ ತನಿಖೆಗೆ ಹೆದರಿ ವಿಜಯ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.