Monday, February 3, 2025

ವಾಹನ ಸವಾರರೇ ಎಚ್ಚರ: ರೂಲ್ಸ್​ ಬ್ರೇಕ್​ ಮಾಡಿದರೆ, ಲೈಸೆನ್ಸ್​ ಕ್ಯಾನ್ಸಲ್​ !

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಟ್ರಾಫಿಕ್​ನಿಂದಾಗಿ ಇಡೀ ಪ್ರಪಂಚದಲ್ಲೆ ಪ್ರಖ್ಯಾತಿ ಗಳಿಸಿದೆ. ಈ ಟ್ರಾಫಿಕ್​​ ಬೇಸತ್ತಿದ್ದ ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ಪುಟ್​ಬಾತ್ ಮೇಲೆ ಹತ್ತಿಸಿಕೊಂಡು ಸವಾರಿ ಮಾಡುತ್ತಾರೆ. ಇದೀಗ ಸಂಚಾರಿ ಪೊಲೀಸರು ಇದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು. ಇನ್ಮುಂದೆ ಪುಟ್​ಪಾತ್​ ಮೇಲೆ ವಾಹನ ಹತ್ತಿಸುವವರ ಲೈಸೆನ್ಸ್​ ಕ್ಯಾನ್ಸಲ್​ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಹೌದು.. ಟ್ರಾಫಿಕ್​ ಸಮಸ್ಯೆ ಎಂದು ಇನ್ನುಮುಂದೆ ವಾಹನಗಳನ್ನು ಪುಟ್​ಪಾತ್​ ಮೇಲೆ ಹತ್ತಿಸುವವರಿಗೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಈ ಹಿಂದೆ ಪುಟ್​ಪಾತ್​ ಮೇಲೆ ವಾಹನ ಹತ್ತಿಸುವ ಸವಾರರ ಮೇಲೆ ಸಂಚಾರಿ ಪೊಲೀಸರು ದಂಡಾಸ್ತ್ರ ಪ್ರಯೋಗಿಸುತ್ತಿದ್ದರು. ನಂತರ ಸಿಗ್ನಲ್​ಗಳಲ್ಲಿ ನಿಂತುಕೊಂಡು ಅಭಿಯಾನಗಳನ್ನು ಆರಂಭಿಸಿದ್ದರು. ಆದರೆ ಇವುಗಳಿಂದ ವಾಹನ ಸವಾರರ ಮೇಲೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ :ನಾನೇ ರಾಜ್ಯಧ್ಯಕ್ಷನಾಗುತ್ತೇನೆ ಎಂಬ ಸಂಪೂರ್ಣ ವಿಶ್ವಾಸವಿದೆ: ಬಿ.ವೈ ವಿಜಯೇಂದ್ರ

ಪುಟ್​ ಪಾತ್​ ಮೇಲೆ ವಾಹನ ಹತ್ತಿಸಿ ಪಾದಾಚಾರಿಗಳ ಪ್ರಾಣಕ್ಕೆ ಕುತ್ತು ತಂದಿಟ್ಟಿದ್ದವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದು. ಇನ್ನು ಮುಂದೆ ಪುಟ್​ಪಾತ್​ ಮೇಲೆ ವಾಹನ ಹತ್ತಿಸುವವರ ಲೈಸೆನ್ಸ್​​ ಕ್ಯಾನ್ಸಲ್​ ಮಾಡಿ ಕ್ರಮ ಕೈಗೊಳ್ಳಲು ಸಂಚಾರಿ ಪೊಲೀಸರು ಮುಂದಾಗಿದ್ದು. ಪದೇ ಪದೇ ರೂಲ್ಸ್​ ಬ್ರೇಕ್​ ಮಾಡುವ ಸವಾರರು ಇನ್ನು ಮುಂದೆ ಎಚ್ಚರದಿಂದ ಇರಬೇಕಾಗುತ್ತದೆ.

RELATED ARTICLES

Related Articles

TRENDING ARTICLES