ಬೆಂಗಳೂರು : ಅನಾಮಧೇಯ ಅಶೋಕ್ ಕುಮಾರ್ ಸಿನಿಮಾದ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿದ್ದ ನಟ ಕಿಶೋರ್ ಕುಮಾರ್ ಪವರ್ ಟಿವಿಯಲ್ಲಿ ಮಾತನಾಡಿದ್ದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲ ಶಕ್ತಿಗಳು ಹಿಡಿತ ಸಾಧಿಸಿದ್ದು. ಇವರ ಪರಿಣಾಮದಿಂದ ನಮ್ಮ ದೇಶ ಅಭಿವೃದ್ದಿ ಪಥದಲ್ಲಿ ಹಿಂದೆ ಉಳಿದಿದೆ ಎಂದು ಹೇಳಿದರು.
ಪವರ್ ಟಿವಿಯೊಂದಿಗೆ ಮಾತನಾಡಿದ ಕಿಶೋರ್ ಪ್ರಜಾಪ್ರಭುತ್ವದ ಎಲ್ಲಾ ವ್ಯವಸ್ಥೆಗಳ ಮೇಲೂ ಕೆಲ ಕೋಮುವಾದಿ ಶಕ್ತಿಗಳು ತಮ್ಮ ಪ್ರಭಾವ ಬೀರುತ್ತಿವೆ. ಕೇವಲ ಕಾರ್ಯಂಗ, ಶಾಸಕಾಂಗವಲ್ಲದೆ ನ್ಯಾಯಾಂಗದಲ್ಲಿಯೂ ಕೋಮುವಾದಿ ಶಕ್ತಿಗಳು ಹಿಡಿತ ಸಾಧಿಸುತ್ತಿವೆ. ಇತ್ತೀಚೆಗೆ ನ್ಯಾಯಧೀಶರೊಬ್ಬರು ಹಿಂದೂ ರಾಷ್ಟ್ರವಾಗಬೇಕು ಎಂದು ಹೇಳಿದ್ದಾರೆ. ಆದರೆ ಈ ದೇಶದಲ್ಲಿ 25%ರಷ್ಟು ಜನರು ಬೇರೆ ವರ್ಗದವರಿದ್ದಾರೆ. ಇಲ್ಲಿ ಹಿಂದು ಎಂಬ ಪದವೇ ಸಮಸ್ಯೆಯಾಗಿದೆ.
ಇದನ್ನೂ ಓದಿ : ಕುಂಭಮೇಳಕ್ಕೆ ತೆರಳಿದ್ದವರ ಬಾಳಲ್ಲಿ ಬಿರುಗಾಳಿ : ಬೆಳಗಾವಿ ಮೂಲದ ತಾಯಿ-ಮಗಳು ಸಾವು !
ನೆಹರು, ಅಂಬೆಡ್ಕರ್ರಂತ ದಾರ್ಶನಿಕರು ಈ ದೇಶವನ್ನು ಪ್ರಗತಿಯ ಪಥದಲ್ಲಿ ನಡೆಸಬೇಕು, ನಾವೆಲ್ಲ ಒಟ್ಟಾಗಿ ಬದುಕಬೇಕು ಎಂದು ಹೇಳಿ ಕೊಟ್ಟರು. ಆದರೆ ಕೆಲವರು ಸೇರಿಕೊಂಡು ನಮ್ಮನ್ನೆಲ್ಲಾ ಸೇರಿಕೊಂಡು ವಾಪಾಸ್ ಕರೆದುಕೊಂಡು ಹೋಗುತ್ತಿದ್ದಾರೆ.
IITಯ ಹೆಡ್ ಒಬ್ಬರು ಬಂದು ಗೋಮೂತ್ರ ಕುಡಿಯಿರಿ ಎಂದು ಹೇಳುತ್ತಿದ್ದಾರೆ. ಆದರೆ ಚೈನಾ ಸೂಪರ್ ಪವರ್ ಆಗ್ತಾಯಿದೆ. ಚೀನಾದ ಸಣ್ಣ ಸಣ್ಣ ಕಂಪನಿಗಳು ಇಂದು ಅಮೇರಿಕಾದ ದೊಡ್ಡ ದೊಡ್ಡ ಕಂಪನಿಗಳಿಗೆ ಟಕ್ಕರ್ ನೀಡುತ್ತಿವೆ. ಅವರು ಎಲ್ಲದರಲ್ಲೂ ಮುಂದುವರಿಯುತ್ತಿದ್ದಾರೆ. ಆದರೆ ನಾವಿನ್ನು ಗೋಮೂತ್ರ ಕುಡಿ, ಆ ಮೂತ್ರ ಕುಡಿ ಎಂದು ಸಂಪ್ರದಾಯದ ಹೆಸರಲ್ಲಿ ಹಿಂದೆ ಉಳಿಯುತ್ತಿದ್ದೇವೆ. ಪೋಲಿಸ್ ವ್ಯವಸ್ಥೆ ಕಾರ್ಯಂಗದ ಒಂದು ಭಾಗವಾಗಿ ದುರ್ಬಳಕೆ ಆಗುತ್ತಿದೆ ಎಂದು ಹೇಳಿದರು.