ಬಾಗಲಕೋಟೆ : ಸಾಕಷ್ಟು ಸಾಲಮಾಡಿಕೊಂಡಿದ್ದ ವ್ಯಕ್ತಿಯೋರ್ವ ಸಾಲಗಾರರಿಂದ ತಲೆ ಮರಿಸಿಕೊಳ್ಳಲು ಬುರ್ಕಾ ಧರಿಸಿ ಓಡಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು. ಬುರ್ಕಾ ಧರಿಸಿ ಓಡಾಡುತ್ತಿದ್ದ ವ್ಯಕ್ತಿಗೆ ಸಾಲ ನೀಡಿದವರು ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 47ರಲ್ಲಿ ಘಟನೆ ನಡೆದಿದ್ದು. ಅಹ್ಮದ್ ಜನಮಸಾಗರ್ ಎಂಬಾತ ಸಾಲಗಾರರಿಂದ ತಲೆಮರೆಸಿಕೊಳ್ಳಲು ಈ ಖರ್ತನಾಕ್ ಐಡಿಯಾ ಮಾಡಿದ್ದಾನೆ. ಸಾಲಗಾರರಿಂದ ಲಕ್ಷಾಂತರ ರೂಪಾಯಿ ಸಾಲಮಾಡಿದ್ದ ಈತ ಅವರಿಗೆ ಸಿಗದೇ ಓಡಾಡಲು ಈ ವಿಧಾನವನ್ನು ಅನುಸರಿಸುತ್ತಿದ್ದ. ಆದರೆ ಇಂದು ಸಾಲಗಾರರು ಮನೆಯ ಬಳಿ ಸಾಲ ವಸೂಲಾತಿಗೆ ಬಂದಾಗ ಈತನ ಅವತಾರ ಕಂಡು ಕೆಲ ಕ್ಷಣ ದಂಗಾಗಿದ್ದಾರೆ.
ಇದನ್ನೂ ಓದಿ : ಆಯಿಲ್ ಟ್ಯಾಂಕರ್ ಬ್ಲಾಸ್ಟ್ : ಇಬ್ಬರು ಸಾ*ವು, ಮೂವರಿಗೆ ಗಂಭೀರ ಗಾಯ!
ಬುರ್ಕಾ ಹಾಕಿ ವೇಶ ಬದಲಿಸಿರುವುದು ಅಹ್ಮದ್ ಎಂದು ತಿಳಿಯುತ್ತಿದ್ದಂತ ಸಾಲಾಗಾರರು ಆತನನ್ನು ಮನೆಯಿಂದ ಹೊರಗೆ ಎಳೆದು ಬುರ್ಕಾ ಕಳಚಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟ ವೈರಲ್ ಆಗಿದೆ.