Saturday, January 25, 2025

ಮಾಜಿ ಕ್ರಿಕೆಟರ್​ ವಿರೇಂದ್ರ ಸೆಹ್ವಾಗ್​ ದಾಂಪತ್ಯ ಜೀವನದಲ್ಲಿ ಬಿರುಕು ?

ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಅವರ ಪತ್ನಿ ಆರತಿ ಅಹ್ಲಾವತ್ ಸುದೀರ್ಘ ಎರಡು ದಶಕಗಳ ದಾಂಪತ್ಯ ಜೀವನದ ನಂತರ ವಿಚ್ಚೇದನ ಪಡೆಯಲು ಮುಂದಾಗಿದ್ದಾರೆ ಎಂದು ಮಾಹಿತಿ ದೊರೆತಿದೆ. 2004ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದು, ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಆದರೆ ಇದರ ಬಗ್ಗೆ ಅಧಿಕೃತ ಹೇಳಿಕೆ ಹೊರಗೆ ಬರಬೇಕಿದೆ.

ವಿರೇಂದ್ರ ಸೆವ್ವಾಗ್​ ಮತ್ತು ಆರತಿ ಇಬ್ಬರು ಪರಸ್ಪರ ಇನ್ಸ್ಟಾಗ್ರಾಂನಲ್ಲಿ ಅನ್​ಫಾಲೋ ಮಾಡಿದ್ದಾರೆ. ಇದು ಇವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಬಂದಿದೆ ಎಂದು ಶಂಕಿಸಲು ಕಾರಣವಾಗಿದೆ. ಜೊತೆಗೆ ಸೆವ್ವಾಗ್​ ಮತ್ತು ಆರತಿ ಇಬ್ಬರು ಕಳೆದ ಕೆಲ ತಿಂಗಳಿಂದ ದೂರ ವಾಸಿಸುತ್ತಿದ್ದಾರೆ ಎಂದು ಇವರ ಕುಟುಂಬದ ಮೂಲಗಳು ಬಹಿರಂಗಪಡಿಸಿದ್ದು. ಈ ಊಹಾಪೋಹಗಳು ಬಲಗೊಳ್ಳಲು ಮತ್ತಷ್ಟು ಪುಷ್ಟಿಯನ್ನು ತುಂಬಿದೆ.

ಇದನ್ನೂ ಓದಿ :ಬೆಂಗಳೂರಲ್ಲಿ ಬಾಂಗ್ಲಾ ಮಹಿಳೆಯ ಭೀಕರ ರೇಪ್ ​& ಮರ್ಡರ್​ !

ಜೊತೆಗೆ ಕಳೆದ ವರ್ಷ ದೀಪಾವಳಿ ವೇಳೆಯಲ್ಲಿ ವಿರೇಂದ್ರ ಸೆವ್ವಾಗ ದೀಪಾವಳಿ ಪೋಸ್ಟ್​ಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದರು. ಈ ಪೋಟೊದಲ್ಲಿ ಸೆಹ್ವಾಗ್​​ ಜೊತೆ ಅವರ ಪುತ್ರರು ಮತ್ತು ಅವರ ತಾಯಿ ಇದ್ದರು. ಈ ವೇಳೆ ಆರತಿಯ ಅನುಪಸ್ಥಿತಿ ವಂದತಿ ಹಬ್ಬಲು ಕಾರಣವಾಗಿತ್ತು.

RELATED ARTICLES

Related Articles

TRENDING ARTICLES