Friday, January 24, 2025

ಒಂದಾಗಿ ಬಾಳಲು ಒಪ್ಪದ ಹೆಂಡತಿ : ಪೆಟ್ರೋಲ್​ ಸುರಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡ ಗಂಡ !

ಬೆಂಗಳೂರು : ಗಂಡ ಹೆಂಡತಿಯ ನಡುವಿನ ಜಗಳ ತಾರಕ್ಕಕ್ಕೆ ಹೋಗಿ ಗಂಡ ಪೆಟ್ರೋಲ್​ ಸುರಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಮೃತ ದುರ್ದೈವಿಯನ್ನು 39 ವರ್ಷದ ಮಂಜುನಾಥ್​​ ಎಂದು ಗುರುತಿಸಲಾಗಿದೆ.

2013ರಲ್ಲಿ ಮಂಜುನಾಥ್​ ಮತ್ತು ನಯನ ಇಬ್ಬರು ಮದುವೆಯಾಗಿದ್ದರು. ಇವರಿಬ್ಬರಿಗೆ 9 ವರ್ಷದ ಮಗನೂ ಇದ್ದ. ಆದರೆ ಇವರಿಬ್ಬರ ನಡುವೆ ಉಂಟಾದ ವೈಮನಸ್ಸಿನಿಂದ 2022ರಲ್ಲಿ ಇಬ್ಬರು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕಳೆದ ಎರಡು ವರ್ಷಗಳಿಂದ ನ್ಯಾಯಾಲಯದಲ್ಲಿ ಡಿವೋರ್ಸ್​ ಪ್ರಕರಣವು ನಡೆಯುತ್ತಿತ್ತು.

ಇದನ್ನೂ ಓದಿ: ಮೈಕ್ರೊ ಫೈನಾನ್ಸ್​ ಕಿರುಕುಳ : ಸಿಎಂಗೆ ಮಾಂಗಲ್ಯ ಸರ ಕಳುಹಿಸಿ ಪ್ರತಿಭಟಿಸಿದ ಮಹಿಳೆಯರು

ಆದರೆ ಇಂದು ಬೆಳಿಗ್ಗೆ 8 ಗಂಟೆಗೆ ಮಂಜುನಾಥ್​ ಹೆಂಡತಿ ನಯನಾ ವಾಸಿಸುತ್ತಿದ್ದ ನಾಗರಭಾವಿಯ ಎನ್​ಜಿಎಫ್ ಲೇಔಟ್​ನಲ್ಲಿದ್ದ ಅಪಾರ್ಟ್​ಮೆಂಟ್​ಗೆ ಬಂದಿದ್ದನು. ಈ ವೇಳೆ ಮಂಜುನಾಥ್​ ತನ್ನ ಪತ್ನಿಗೆ ವಿಚ್ಚೇದನ ಪಡೆಯೋದು ಬೇಡ. ಇಬ್ಬರು ಒಂದಾಗಿ ಬಾಳೋಣ ಎಂದು ಕೇಳಿಕೊಂಡಿದ್ದನು.  ಈ ವೇಳೆ ಇದಕ್ಕೆ ಒಪ್ಪದ ಪತ್ಮಿ ನಯನ ನೀನು ನನಗೆ ಸಾಕಷ್ಟು ಹಿಂಸೆ ಕೊಟ್ಟಿದ್ದೀಯ, ನಾನು ನಿನ್ನ ಜೊತೆ ಬರೋದಿಲ್ಲ ಎಂದು ಹೇಳಿದ್ದಳು.

ಇದರಿಂದ ಮನನೊಂದ ಮಂಜುನಾಥ್​ 10:30ರ ಸುಮಾರಿಗೆ ಪೆಟ್ರೋಲ್​ ತಂದು ಆಕೆಯ ಮನೆಯಲ್ಲಿಯೆ  ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಜಾನ್ಞಭಾರತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES