ಆನೇಕಲ್ : ಕ್ಷುಲ್ಲಕ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಅನೇಕಲ್ನಲ್ಲಿ ನಡೆದಿದ್ದು. ಮೃತ ವ್ಯಕ್ತಿಯನ್ನು 45 ವರ್ಷದ ರಾಮಚಂದ್ರಪ್ಪ ಎಂದು ಗುರುತಿಸಲಾಗಿದೆ.
ಬೆಂಗಳೂರು ಹೊರವಲಯದ ಅನೇಕಲ್ ತಾಲ್ಲೂಕಿನ ದೊಡ್ಡಹಾಗಡೆ ಗ್ರಾಮದಲ್ಲಿ ಘಟನೆ ನಡೆದಿದ್ದು. ನಿನ್ನೆ ಸಂಜೆ ರಾಮಚಂದ್ರಪ್ಪನ ಪತ್ನಿ ದೃಷ್ಟಿ ತೆಗೆದ ನೀರನ್ನು ರಸ್ತೆಯಲ್ಲಿ ಹಾಕಲು ಬಂದಿದ್ದರು. ಈ ವೇಳೆ ಅಕ್ಕಪಕ್ಕದ ನಿವಾಸಿಗಳು ರಾಮಚಂದ್ರಪ್ಪ ಮತ್ತು ಆತನ ಪತ್ನಿಯ ಜೊತೆ ಜಗಳ ಮಾಡಿದ್ದಾರೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿದ್ದು. ಈ ವೇಳೆ ಮಹಿಳೆಯರ ಗುಂಪು ರಾಮಚಂದ್ರಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ : ಕೌಟುಂಬಿಕ ಕಲಹ : ಹೆಂಡತಿಯೆ ಕೊ*ಲೆ ಮಾಡಿ, ಕುಕ್ಕರ್ನಲ್ಲಿ ಬೇಯಿಸಿ ಕೆರೆಗೆ ಎಸೆದ ಪಾಪಿ ಪತಿ !
ಈ ವೇಳೆ ಹಲ್ಲೆಯಿಂದ ನಿತ್ರಾಣಗೊಂಡ ರಾಮಚಂದ್ರಪ್ಪ ಸ್ಥಳದಲ್ಲೆ ಉರುಳಿ ಬಿದ್ದಿದ್ದಾನೆ. ತಕ್ಷಣವೆ ನಾರಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಿದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ರಾಮಚಂದ್ರಪ್ಪ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಅನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು. ಹಲ್ಲೆ ನಡೆಸಿದ ಇಬ್ಬರು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.