ರಾಯಚೂರು : ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದ್ದು. ಫೈನಾನ್ಸ್ ಸಿಬ್ಬಂದಿಗಳ ಕಾಟದಿಂದ ಬೇಸತ್ತಿರುವ ಅನೇಕ ಸಾಲಗಾರರು, ಫೈನಾನ್ಸ್ ಸಿಬ್ಬಂದಿಗಳ ಕಾಟಕ್ಕೆ ಸಾಯುವುದೊಂದೆ ಬಾಕಿ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ.
ರಾಯಚೂರಿನ ಮಾನ್ವಿ ತಾಲ್ಲೂಕಿನ ಬೆಟದೂದು ಸೇರಿದಂತೆ ಹಲವು ಗ್ರಾಮಗಳಲ್ಲಿ ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದು. ಇವರ ಕಿರುಕುಳ ಸಹಿಸದೆ ಯುವಕನೋರ್ವ ಸಾವನ್ನಪ್ಪಿದ್ದಾನೆ. ಮೃತ ಯುವಕ ಫೈನಾನ್ಸ್ನಿಂದ ಸುಮಾರು 10 ಲಕ್ಷ ಹಣವನ್ನು ಸಾಲ ಪಡೆದಿದ್ದ. ಇದಕ್ಕೆ ಪ್ರತಿಯಾಗಿ ಸುಮಾರು 15 ಲಕ್ಷದಷ್ಟು ಬಡ್ಡಿ ಕಟ್ಟಿದ್ದನು ಎಂದು ಹೇಳಲಾಗಿದೆ. ಆದರೆ ಸಾಲದ ಮೊತ್ತದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಇದರಿಂದ ಬೇಸತ್ತ ಯುವಕ ಆತ್ಮಹತ್ಯೆ ಶರಣಾಗಿದ್ದಾನೆ.
ಇದನ್ನೂ ಓದಿ: ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕ ಸಾ*ವು !
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಹಾವಳಿಗೆ ಬೇಸತ್ತ ಸಾಲಗಾರರು !
ಮೈಕ್ರೋ ಸಿಬ್ಬಂದಿಗಳ ಹಾವಳಿಗೆ ಮಾನ್ವಿಯ ಬೆಟ್ಟದೂರು ಸೇರಿದಂತೆ ಹಲವು ಗ್ರಾಮದ ಜನರು ಬೇಸತ್ತಿದ್ದು. ಫೈನಾನ್ಸ್ ಸಿಬ್ಬಂದಿಗಳೂ, ಹಗಲು ರಾತ್ರಿ ಎನ್ನದೆ ಮನೆಗೆ ಬಂದು ಕೂರುತ್ತಾರೆ. ಮಹಿಳೆಯರು ಅಡುಗೆ ಮಾಡುತ್ತಿದ್ದರೆ ಮನೆಯೊಳಗೆ ಬಂದು ಕೂರುತ್ತಾರೆ. ದುಡಿಯಲು ಹೋಗಬೇಕು ಎಂದರೆ ಸಾಲ ಕಟ್ಟಿ ನಂತರ ಹೋಗಿ ಎನ್ನುತ್ತಾರೆ. ಬರಗಾಲವಿದೆ ಸಾಲ ಹೇಗೆ ಕಟ್ಟುವುದು ಎಂದರೆ ಕಿಡ್ನಿ, ಮನೆ, ಆಸ್ತಿ ಮಾರಿ ಎನ್ನುತ್ತಾರೆ. ಇಷ್ಟೆಲ್ಲಾ ಕಿರುಕುಳ ಸಹಿಸದೆ ಸಾಯುವುದೊಂದೆ ಬಾಕಿ ಎಂದು ಸಾಲಗಾರರು ತಮ್ಮ ಸಂಕಟವನ್ನು ತೋಡಿಕೊಂಡಿದ್ದಾರೆ.