ಟರ್ಕಿ : ವಾಯುವ್ಯ ಟರ್ಕಿಯ ಸ್ಕೀ ರೆಸಾರ್ಟ್‌ನಲ್ಲಿರುವ ಹೋಟೆಲ್‌ನಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ದೊರೆತಿದ್ದು. ಘಟನೆಯಲ್ಲಿ 51ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಟರ್ಕಿಯ ಶಾಲೆಗಳಲ್ಲಿ ರಜೆ ಇದ್ದ ಕಾರಣದಿಂದ ಸ್ಕೀ ರೆಸಾರ್ಟ್ನಲ್ಲಿ ಪ್ರವಾಸಿಗರು ತುಂಬಿ ತುಳುಕಿದ್ದರು. 12 ಅಂತಸ್ತಿನ ಹೋಟೆಲ್‌ನಲ್ಲಿ 234 ಅತಿಥಿಗಳಿಗೆ ಆತಿಥ್ಯ ವಹಿಸಲಾಗಿತ್ತು. ಆದರೆ ಮಂಗಳವಾರ ಬೆಳಗಿನ ಜಾವ ಮೂರು ಗಂಟೆ ವೇಳೆಗೆ ರೆರ್ಸಾಟ್ನಲ್ಲಿ ಭೀಕರ ಬೆಂಕಿ ಅಪಘಾತ ಸಂಭವಿಸಿದೆ. ಈ ಬೆಂಕಿ ಅವಘಡದಲ್ಲಿ ಮೃತರ ಸಂಖ್ಯೆ 76ಕ್ಕೆ ಏರಿಕೆಯಾಗಿದ್ದು. 50ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎಂದು ಮಾಹಿತಿ ದೊರೆತಿದೆ.
ಇದನ್ನೂ ಓದಿ : ಕಾರ್ಮಿಕರ ಕೈಗಳ ಮೇಲೆ ಭೀಕರ ಹಲ್ಲೆ ನಡೆಸಿದ್ದ ಮತ್ತೊಂದು ವಿಡಿಯೋ ವೈರಲ್
ಈಗಾಗಲೇ ರೆಸಾರ್ಟ್ನಿಂದ 76 ಶವಗಳನ್ನು ಹೊರಗೆ ತೆರೆಯಲಾಗಿದ್ದು. 45 ಶವಗಳನ್ನು ಮಾತ್ರ ಗುರುತಿಸಲಾಗಿದೆ. ಉಳಿದ ಶವಗಳ ಗುರುತು ಪತ್ತೆ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಯಲಾಗಿದೆ. ಘಟನಾ ಸ್ಥಳಕ್ಕೆ ಸಚಿವ ಅಲಿ ಯೆರ್ಲಿಕಾಯಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.