ಮೈಸೂರು: ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಕೋಪಗೊಂಡ ಪತಿ ಹೆಂಡತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದ್ದು. ಸ್ವಂತ ಮಗನ ಎದುರೆ ಕಟುಕ ತಂದೆ ಈ ಕೃತ್ಯವನ್ನು ಎಸೆಗಿದ್ದಾನೆ. ತಂದೆಯ ರಾಕ್ಷಸ ಕೃತ್ಯವನ್ನು ಸ್ವಂತ ಮಗನೆ ಬಿಚ್ಚಿಟ್ಟಿದ್ದಾನೆ.
ಮೈಸೂರು ಜಿಲ್ಲೆ ಎಚ್.ಡಿ ಕೋಟೆಯ ಹನುಮಂತ ನಗರದಲ್ಲಿ ಘಟನೆ ನಡೆದಿದೆ. ರಾಕ್ಷಿಸಿ ಕೃತ್ಯವನ್ನು ಎಸೆಗಿಸಿರುವ ಪತಿಯನ್ನು ಮಲ್ಲೇಶ್ ನಾಯ್ಕ್ ಎಂದು ಗುರುತಿಸಲಾಗಿದ್ದು. ಪತಿಯ ಕ್ರೌರ್ಯದಿಂದ ಗಾಯಗೊಂಡ ಮಹಿಳೆಯನ್ನು ಮಧುರ ಎಂದು ಗುರುತಿಸಲಾಗಿದೆ. ಮಹಿಳೆಗೆ ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ವಾಹನ ಪಲ್ಟಿ : ನಾಲ್ವರು ಸಾ*ವು, 10 ಮಂದಿಗೆ ಗಾಯ !
ಮಲ್ಲೇಶ್ ನಾಯ್ಕ್ ಮೂಲತಹ ವಿಜಯನಗರ ಜಿಲ್ಲೆ ಕೂಡ್ಲಗಿ ತಾಲೂಕಿನ ಬಿಬಿ ತಾಂಡದವರು.ಕಳೆದ 8 ವರ್ಷಗಳ ಹಿಂದೆ ಅದೇ ಗ್ರಾಮದ ಮಧುರಳನ್ನ ವಿವಾಹವಾಗಿದ್ದ ಮಲ್ಲೇಶ್ ನಾಯ್ಕ್.ಮೈಸೂರು ಜಿಲ್ಲೆ ಎಚ್.ಡಿ ಕೋಟೆಯ ಕೆಎಸ್ಆರ್ಟಿಸಿ ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದನು. ಕಳೆದ ಆರೇಳು ವರ್ಷದಿಂದ ಪತ್ನಿಗೆ ವರದಕ್ಷಣೆ ಕಿರುಕುಳ ಹಾಗೂ ಪತ್ನಿಯ ಬಗೆ ಅನುಮಾನದಿಂದ ನೋಡುತ್ತಿದ್ದ ಮಲ್ಲೇಶ್.ಪ್ರತಿ ದಿನ ಕುಡಿದು ಬಂದು ಸೈಟ್ ಕೊಡಿಸುವಂತೆ ಗಲಾಟೆ ಮಾಡುತ್ತಿದ್ದ.
ಆದರೆ ಈ ನಡುವೆ ಕೆಲ ದಿನಗಳ ಹಿಂದೆ ಒಂದೆರೆಡು ದಿನಗಳ ಮಟ್ಟಿಗೆ ತವರು ಮನೆಗೆ ಹೋಗಿದ್ದ ಮಧುರ. ಈ ವಿಚಾರವನ್ನೇ ಇಟ್ಟುಕೊಂಡು ರಾಕ್ಷಸಿ ಪತಿ ಈ ಕೃತ್ಯವನ್ನು ಎಸೆಗಿದ್ದಾನೆ. ಘಟನೆ ಸಂಬಂಧ ಎಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವಾಗಿದ್ದು. ಮಧುರಗೆ ಕಿರುಕುಳ ನೀಡುತ್ತಿದ್ದ ಮಲ್ಲೇಶ್ ನಾಯ್ಕ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.