ವಿಜಯಪುರ : ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ವಿಜಯಪುರ ಗ್ರಾಮೀಣ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ವೇಳೆ ನ್ಯಾಯಾಲಯಕ್ಕೆ ಬಂದ ಖದೀಮರು ಕುಂಟುತ್ತ ಬಂದಿದ್ದು. ಆರೋಪಿಗಳಿಗೆ ಪೊಲೀಸರು ತಮ್ಮದೇ ಭಾಷೆಯಲ್ಲಿ ಟ್ರೀಟ್ಮೆಂಟ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ತಡವಾಗಿ ಕೆಲಸಕ್ಕೆ ಬಂದ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು !
ರಾಹುಲ್ ಖೇಮು ರಾಠೋಡ, ಕನಕಮೂರ್ತಿ ಜ್ಞಾನದೇವ ಗೋಂಧಳಿ, ಖೇಮು ರಾಠೋಡ, ವಿಶಾಲ್ ಜುಮನಾಳ ಹಾಗೂ ಸಚಿನ ಮಾನವರ ಎಂಬ ಐವರನ್ನು ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಈ ಆರೋಪಿಗಳಿಗೆ ಪೊಲೀಸರು ತಮ್ಮ ಶೈಲಿಯಲ್ಲೆ ಟ್ರೀಟ್ಮೆಂಟ್ ನೀಡಿದ್ದು. ಕಾರ್ಮಿಕರ ಕಾಲಿಗೆ ಹಲ್ಲೆ ನಡೆಸಿ ಹಿಂಸೆ ನಡೆಸಿದ ಆರೋಪಿಗಳು ನಡೆಯಲು ಆಗದೆ ಕುಂಟುತ್ತಾ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಪ್ರಸಾದ ತಯಾರಿಸಿದ ಗೌತಮ್ ಅದಾನಿ !
ಗ್ರಾಮೀಣ ಠಾಣೆ ಸಿಪಿಐ ರಾಯಗೊಂಡ ಜಾನರ್ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ಕೋರ್ಟ್ಗೆ ಪೊಲೀಸರನ್ನು ಹಾಜರು ಪಡಿಸುವ ಮೊದಲು ಆರೋಪಿಗಳು ಹಲ್ಲೆ ನಡೆಸಿದ ಸ್ಥಳ ಮಹಜರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.