Wednesday, January 22, 2025

ಗಾಂಧಿ ಹಿಂದು ವಿರೋಧಿಯಲ್ಲ, ಸಾಯುವಾಗಲು ‘ಹೇ ರಾಮ್’​ ಎಂದು ಹೇಳಿದ್ದರು : ಸಿದ್ದರಾಮಯ್ಯ

ಬೆಳಗಾವಿ : ಜಿಲ್ಲೆಯಲ್ಲಿ ಆಯೋಜಿಸಿರುವ ಗಾಂಧಿ ಭಾರತ್​ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ ಗಾಂಧಿ ಈ ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಈ ವೇಳೆ ಗಾಂಧಿ ಹಿಂದೂ ವಿರೋಧಿ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ ‘ ಗಾಂಧಿ ಹಿಂದೂ ವಿರೋಧಿಯಲ್ಲ, ಅವರು ಸಾಯುವಾಗಲೂ ಹೇ ರಾಮ್​ ಎಂದು ಹೇಳುತ್ತಿದ್ದರು ಎಂದು ಹೇಳಿದರು .

ಸುವರ್ಣ ಸೌದದಲ್ಲಿ ಗಾಂಧೀ ಪುತ್ತಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಮಹಾತ್ಮ ಗಾಂಧೀಜಿಯವರ ಪುತ್ಥಳಿ ಅನಾವರಣ ಮಾಡಿದ ಖರ್ಗೆ ಅವರಿಗೆ ಸರ್ಕಾರದ ವತಿಯಿಂದ ಧನ್ಯವಾದ ಅರ್ಪಿಸಿದರು. ರಾಹುಲ್​ ಗಾಂಧಿಯು ಕೂಡ ಕಾರ್ಯಕ್ರಮಕ್ಕೆ ಬರುತ್ತಿದ್ದರು, ಆದರೆ ಅನಾರೋಗ್ಯದ ಹಿನ್ನಲೆ ಅವರು ಏಪೋರ್ಟ್​ನಿಂದ ವಾಪಾಸಾಗಿದ್ದಾರೆ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಆರೈಸಿದರು.

ಮುಂದುವರಿದು ಮಾತನಾಡಿದ ಸಿದ್ದರಾಮಯ್ಯ ‘ 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ನ ಐತಿಹಾಸಿಕ ಅಧಿವೇಶನ ನಡೆಯಿತು.ಅದರ ಅಧ್ಯಕ್ಷತೆಯನ್ನ ಗಾಂಧೀಜಿಯವರು ವಹಿಸಿದ್ದರು. ಅವರು ಇಲ್ಲೆ ಮೊದಲ ಭಾರಿಗೆ ಅಧ್ಯಕ್ಷರಾಗಿದ್ದರು ಮತ್ತು ಇದೇ ಕೊನೆಯ ಬಾರಿ. ಅವರು ತಮ್ಮ ಭಾಷಣದಲ್ಲಿ ಅಹಿಂಸೆ, ಸತ್ಯ, ಸಮಾನತೆ, ಗ್ರಾಮೀಣ ಅಭಿವೃದ್ಧಿ ವಿಷಯಗಳನ್ನು ಪ್ರಸ್ತಾಪ ಮಾಡ್ತಿದ್ದರು. ‘

ಇದನ್ನೂ ಓದಿ :ದರ್ಶನ್​ ಗನ್​ ಲೈಸೆನ್ಸ್ ಅಮಾನತು : ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದ ಕಮಿಷನರ್​ !

ಗಾಂಧಿ ಹಿಂದೂ ವಿರೋಧಿಯಲ್ಲ !

ಗಾಂಧಿ ವಿಷಯದಲ್ಲಿ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ ‘ ಗಾಂಧಿ ಅವರು ಎಂದು ಹಿಂದು ವಿರೋಧಿಯಾಗಿರಲಿಲ್ಲ. ಬಿಜೆಪಿಯವರ ಆರೋಪ ನೂರಕ್ಕೆ ನೂರು ಸುಳ್ಳು, ಗಾಂಧಿ ಶ್ರೀ ರಾಮ್​, ಶ್ರೀ ರಾಮ್​ ಎಂದು ಹೇಳುತ್ತಿದ್ದರು. ಗೋಡ್ಸೆ ಗುಂಡು ಹೊಡೆದಾಗಲು ಅವರು ಹೇ ರಾಮ್, ಹೇ ರಾಮ್​ ಎಂದು ಹೇಳಿದ್ದರು. ಅವರು ಅಪ್ಪಟ ಹಿಂದೂವಾಗಿದ್ದರೆ ವಿನಃ , ಅವರು ಹಿಂದೂ ವಿರೋಧಿಯಾಗಿರಲಿಲ್ಲ.

ಅವರು ತಮ್ಮ ಜೀವನದ ಉದ್ದಕ್ಕೂ ಸ್ವಾತ್ರಂತ್ರ್ಯ ಮಾತ್ರ ನೀಡಿಲ್ಲ, ಜೊತೆಗೆ ಸರ್ಕಾರ ಹೇಗಿರಬೇಕು, ಮುಂದೆ ದೇಶ ಹೇಗಿರಬೇಕು ಎಂದು ತಿಳಿಸಿದ್ದರು. ಆದರೆ ಮತಾಂದ ಗೋಡ್ಸೆ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ, ಬಿಜೆಪಿಯವರು ಮನುವಾದಿಗಳು, ಜಾತಿ ಜಾತಿ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಾರೆ.

ಆದರೆ ಕಾಂಗ್ರೆಸ್ ನವರು ಸಂವಿಧಾನ ಪರವಾಗಿದ್ದವರು. ಅದಕ್ಕೆ ಬಿಜೆಪಿಯವರು ವಿರೋಧಿಸುತ್ತಾರೆ. ಸಂವಿಧಾನ ರಕ್ಷಣೆ ಮಾಡಿದ್ರೆ ಅದು ನಮ್ಮನ್ನು ರಕ್ಷಣೆ ಮಾಡುತ್ತೆ. ಅನೇಕ ವರ್ಷಗಳಿಂದ ಬಿಜೆಪಿ ಸಂವಿಧಾನವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ ನಾವು ಗಾಂಧಿ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಹೇಳಿದರು.

RELATED ARTICLES

Related Articles

TRENDING ARTICLES