Wednesday, January 22, 2025

ಎಟಿಎಂಗೆ ತುಂಬ ಬೇಕಿದ್ದ ಹಣ ಕದ್ದು, ಪ್ರೇಯಸಿಗೆ ಚಿನ್ನ ಕೊಡಿಸಿದ್ದ ಖದೀಮ ಅಂದರ್​ !

ಮೈಸೂರು: ಎಂಟಿಎಂಗೆ ತುಂಬ ಬೇಕಿದ್ದ ಹಣವನ್ನು ಕದ್ದು, ಪ್ರೇಯಸಿಗೆ ಚಿನ್ನ ಕೊಡಿಸಿದ್ದ ಖದೀಮನ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಿಳೆಕೆರೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ತುರುಗನೂರಿನ ಅಕ್ಷಯ್, ಮೈಸೂರಿನ ಟಿಎಲ್​.ಎಂಟರ್​ಪ್ರೈಸಸ್​ನಲ್ಲಿ ಕೆಲಸ ಮಾಡುತ್ತಿದ್ದನು. ತಾನು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಸುಮಾರು 16 ಎಟಿಎಂಗಳಿಗೆ ಹಣ ತುಂಬುವ ಕೆಲಸವನ್ನು ಮಾಡುತ್ತಿದ್ದನು. ಆದರೆ ಕೆಲ ದಿನಗಳ ಹಿಂದೆ ಗದ್ದಿಗೆ ಗ್ರಾಮಾದ ಎಟಿಎಂಗೆ ಹಣ ತುಂಬಲು ಹೋಗಿದ್ದ ಅಕ್ಷಯ್​ ಎಟಿಎಂಗೆ ಹಣ ತುಂಬದೆ 5 ಲಕ್ಷದ 80 ಸಾವಿರ ರೂಪಾಯಿ ಹಣವನ್ನು ತನ್ನ ಬ್ಯಾಗ್​ಗೆ ಇಳಿಸಿದ್ದನು. ಇದೇ ಹಣದಲ್ಲಿ ತನ್ನ ಪ್ರೇಯಸಿಗೆ ಚಿನ್ನವನ್ನು ಕೊಡಿಸಿದ್ದನು.

ಇದನ್ನೂ ಓದಿ : ಗಾಂಧಿ ಅನುಯಾಯಿಯಾಗಿ ಗಾಂಧಿ ಭಾರತ್ ಕಾರ್ಯಕ್ರಮಕ್ಕೆ ಬಂದಿದ್ದೇನೆ : ಎಸ್​.ಟಿ ಸೋಮಶೇಖರ್​

ಘಟನೆ ಸಂಬಂಧ ಟಿ.ಎಲ್​ ಎಂಟರ್​ಪ್ರೈಸಸ್​​ ಸಂಸ್ಥೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿತ್ತು. ದೂರು ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದರು. ಆದರೆ ನಿನ್ನೆ ಅಕ್ಷಯ್ ತನ್ನ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡುವ ವೇಳೆ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.ಈ ವೇಳೆ ಪೊಲೀಸರಿಗೆ ಅವಾಜ್​ ಹಾಕಿದ ಅಕ್ಷಯ್​ ಪೊಲೀಸರನ್ನು ತಳ್ಳಾಡಿದ್ದಾನೆ. ಆದರೆ ಕೊನೆಗೂ ಆರೋಪಿಯನ್ನು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES