Wednesday, January 22, 2025

ಗಾಂಧಿ ಅನುಯಾಯಿಯಾಗಿ ಗಾಂಧಿ ಭಾರತ್ ಕಾರ್ಯಕ್ರಮಕ್ಕೆ ಬಂದಿದ್ದೇನೆ : ಎಸ್​.ಟಿ ಸೋಮಶೇಖರ್​

ಬೆಳಗಾವಿ : ಜಿಲ್ಲೆಯಲ್ಲಿ ನಡೆಯುತ್ತಿರುವ ಗಾಂಧಿ ಭಾರತ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕ ಎಸ್,ಟಿ. ಸೋಮಶೇಖರ್ ಆಗಮಿಸಿದ್ದಾರೆ. ಈ ಕುರಿತು ಮಾಧ್ಯಮದದೊಂದಿಗೆ ಮಾತನಾಡಿದ ಶಾಸಕ ಸೋಮಶೇಖರ್​ ನಾನು ಗಾಂಧಿ ಅನುಯಾಯಿ, ಸಭೆಗೆ ಆಹ್ವಾನ ಇತ್ತು. ಅದಕ್ಕೆ ಬಂದಿದ್ದೇನೆ ಎಂದು ಹೇಳಿದರು.

ಬೆಳಗಾವಿ ಕಾಂಗ್ರೆಸ್​ ಅಧಿವೇಶನಕ್ಕೆ 100 ವರ್ಷವಾದ ಹಿನ್ನಲೆ ಡಿಸೆಂಬರ್​ 26ರಂದು ಬೆಳಗಾವಿಯಲ್ಲಿ ಗಾಂಧಿ ಭಾರತ್​ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಆದರೆ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ನಿಧನ ಹೊಂದಿದ ಕಾರಣ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಇದೀಗ ಈ ಕಾರ್ಯಕ್ರಮವನ್ನು ಮತ್ತೆ ಆಯೋಜಿಸಿದ್ದು. ಕಾಂಗ್ರೆಸ್​ ಅನೇಕ ರಾಷ್ಟ್ರೀಯ ನಾಯಕರು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಜಿ ಕಾಂಗ್ರೆಸ್​ ಶಾಸಕ ಹಾಗೂ ಹಾಲಿ ಬಿಜೆಪಿ ಶಾಸಕರಾಗಿರುವ ಎಸ್​.ಟಿ ಸೋಮಶೇಖರ್​ ಕೂಡ ಭಾಗಿಯಾಗಿದ್ದಾರೆ.

ಇದನ್ನೂ ಓದಿ:  ದಿನಗೂಲಿ ಕೆಲಸಗಾರರ ಮೇಲೆ ದೌರ್ಜನ್ಯ : ಮುನಿರತ್ನ ಮೇಲೆ FIR ದಾಖಲು !

ಈ ಕುರಿತು ಮಾತನಾಡಿದ ಶಾಸಕ ಎಸ್​.ಟಿ ಸೋಮಶೇಖರ್​ ‘ಸರ್ಕಾರಿ ಕಾರ್ಯಕ್ರಮದ ಆಹ್ವಾನ ಇತ್ತು, ಅದಕ್ಕೆ ಬಂದಿದ್ದೇನೆ. ನಾನು ಮಹಾತ್ಮ ಗಾಂಧಿಯವರ ಅನುಯಾಯಿ. ಅವರ ಮೇಲೆ ನಾನು ಗೌರವ ಇಟ್ಟು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಆದರೆ ಬಿಜೆಪಿಗೂ ಗಾಂಧಿಗೂ ಸಾಕಷ್ಟು ಅಜಗಜಾಂತರ ಇದೆ. ಆದರೆ ನಾನು ಮೂಲ ಕಾಂಗ್ರೆಸಿಗ ಅದಕ್ಕೆ ನಾನು ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್​ಗೆ ಮತ್ತೆ ಘರ್​ ವಾಪಾಸಿ ಮಾಡುವ ವಿಚಾರದ ಕುರಿತು ಮಾತನಾಡಿದ ಸೋಮಶೇಖರ್​ ‘ ಕಾಂಗ್ರೆಸ್​ಗೆ ಹೋಗುವ ಕುರಿತು ಇನ್ನು ವಿಚಾರ ಮಾಡಿಲ್ಲ ಎಂದು ಹೇಳಿದರು. ವಿಪಕ್ಷ ನಾಯಕರು ಕಾರ್ಯಕ್ರಮಕ್ಕೆ ಗೈರಾದ ವಿಚಾರದ ಕುರಿತು ಮಾತನಾಡಿದ ಶಾಸಕ ಸೋಮಶೇಕರ್​ ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು, ಎಲ್ಲಾ ವಿಷಯದಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ. ಬಿಜೆಪಿಯವರು ಎಲ್ಲದರಲ್ಲು ರಾಜಕಾರಣ ಮಾಡಲು ಹೊರಟಿದ್ದಾರೆ. ಆದರೆ ನಮಗೆ ಗಾಂಧೀ ಮೇಲೆ ಗೌರವ ಇದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES