ಹುಬ್ಬಳ್ಳಿ : ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ‘ ಗಾಂಧಿ ಹತ್ಯೆಯಲ್ಲಿ ನೆಹರು ಪಾತ್ರವಿದೆ, ಗೋಡ್ಸೆ ಹೊಡೆದಿದ್ದು ಕೇವಲ ಒಂದು ಗುಂಡು ಮಾತ್ರ, ಆದರೆ ಉಳಿದ ಎರಡು ಗುಂಡುಗಳು ಯಾರವು ? ಆ ಎರಡು ಗುಂಡುಗಳನ್ನು ಹೊಡೆಸಿದ್ದು ನೆಹರು ಎಂದು ಹೇಳಿದರು.
ಕಾಂಗ್ರೆಸ್ ಅಂಬೆಡ್ಕರ್ಗೆ ಸಾಕಷ್ಟು ಅಪಮಾನ ಮಾಡಿದೆ ಎಂದು ಹೇಳಿದ ಯತ್ನಾಳ್ ‘ ಕಾಂಗ್ರೆಸ್ ಅಂಬೆಡ್ಕರ್ಗೆ ಸಾಕಷ್ಟು ಅಪಮಾನ ಮಾಡಿದೆ. ಈಗ ಕಾಂಗ್ರೆಸ್ ಅಂಬೆಡ್ಕರ್ ಹೆಸರಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇವರಿಗೆ ಜೈ ಭೀಮ್ ಎನ್ನುವ ಯಾವುದೇ ಅರ್ಹತೆ ಇಲ್ಲ, ಅಷ್ಟೆ ಅಲ್ಲದೆ ಗೋಡ್ಸೆ ಗಾಂಧಿಗೆ ಕೇವಲ ಒಂದು ಗುಂಡು ಹೊಡೆದಿದ್ದಾರೆ. ಇನ್ನುಳಿದ ಎರಡು ಗುಂಡುಗಳು ಯಾರವು? ಎಂದು ಪ್ರಶ್ನಿಸಿದ ಯತ್ನಾಳ್, ಗಾಂಧಿ ಹತ್ಯೆಯಲ್ಲಿ ನೆಹರು ಪಾತ್ರವಿದೆ ಎಂದು ಹೇಳಿದರು.
ಇದನ್ನೂ ಓದಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ : ರಸ್ತೆ ಮೇಲೆ ಹರಿಯಿತು ಬ್ಯಾರಲ್ಗಟ್ಟಲೆ ಕ್ರೂಡ್ ಆಯಿಲ್ !
ನನ್ನ ಮೇಲೆ ಪ್ರಕರಣ ದಾಖಲು ಮಾಡುತ್ತಾರೆ, ಆದರೆ ವಿಜಯೇಂದ್ರ ಮೇಲೆ ಕೇಸ್ ಹಾಕಲ್ಲ !
ರಾಜ್ಯ ಸರ್ಕಾರದ ಬಗ್ಗೆ ಮಾತನಾಡಿದ ಯತ್ನಾಳ್ ‘ ಮೂಡಾ ಹಗರಣದಲ್ಲಿ ಯಾರೂ ಸಾಚಾ ಇಲ್ಲ, ಸಿಎಂ ಸಿದ್ದರಾಮಯ್ಯರೆ 185 ಕೋಟಿ ವಾಲ್ಮೀಕಿ ಹಗರಣವನ್ನು ಒಪ್ಪಿಕೊಂಡಿದ್ದಾರೆ. ಆದರೆ ಅವರು ಮಾತ್ರ ಕೇಂದ್ರ ಸರ್ಕಾರ ನಮ್ಮ ಮೇಲೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದರೆ ರಾಜ್ಯದಲ್ಲಿ ನನ್ನ ಮೇಲೆ ಮತ್ತು ಸಿಟಿ ರವಿಯನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಹಿಂದೂಗಳ ಬಗ್ಗೆ ನಾವು ಮಾತನಾಡಿದರೆ ಕೇಸ್ ಹಾಕುತ್ತಾರೆ. ಆದರೆ ವಿಜಯೇಂದ್ರನ ಮೇಲೆ ಮಾತ್ರ ಕೇಸ್ ಹಾಕಲ್ಲ. ಹಿಂದೂಗಳ ಭಾವನೆ ಕೇರಳಿಸಿ , ರಾಜ್ಯದಲ್ಲಿ ದಂಗೆ ಏಳಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಈ ವಿಶಯದಲ್ಲಿ ನಾವು ಕೂಡ ಹಿಂದೆ ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದ್ದೇವೆ. ನಮ್ಮ ಸರ್ಕಾರದಲ್ಲಿ ಸರಿಯಾಗಿ ಕ್ರಮ ಕೈಗೊಂಡಿದ್ದರೆ ಈ ರೀತಿಯ ಘಟನೆಗಳು ಆಗುತ್ತಿರಲಿಲ್ಲ ಎಂದು ಹೇಳಿದರು.