ಹಾವೇರಿ : ರಸ್ತೆ ಬದಿಯಲ್ಲಿ ಗಿಡಗಳಿಗೆ ನೀರು ಹಾಯಿಸುತ್ತಿದ್ದ ಟ್ರ್ಯಾಕ್ಟರ್ ಮತ್ತು ಕ್ರೂಡ್ ಆಯಿಲ್ ಸಾಗಿಸುತ್ತಿದ್ದ ಲಾರಿ ನಡುವೆ ಭೀಕರ ಅಪಘಾತಾವಾಗಿದ್ದು. ಅಪಘಾತದಲ್ಲಿ ಲಾರಿ ಚಾಲಕನಿಗೆ ಗಂಭೀರ ಗಾಯವಾಗಿದೆ. ಅಪಘಾತದ ರಭಸಕ್ಕೆ ಲಾರಿಯಲ್ಲಿ ಸಾಗಿಸುತ್ತಿದ್ದ ಕ್ರೂಡ್ ಆಯಿಲ್ ರಸ್ತೆ ಮೇಲೆ ಹರಿದಿದ್ದು. ಜನರು ಕ್ರೂಡ್ ಆಯಿಲ್ ತುಂಬಿಕೊಳ್ಳಲು ಮುಗಿಬಿದ್ದಿದ್ದಾರೆ.
ಹಾವೇರಿಯ ಮೊಟೆಬೇನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿ(NK4)ನಲ್ಲಿ ಅಪಘಾತವಾಗಿದ್ದು. ರಸ್ತೆ ಬದಿಯಲ್ಲಿದ್ದ ಗಿಡಗಳಿಗೆ ನೀರು ಹಾಯಿಸುತ್ತಿದ್ದ ಟ್ರ್ಯಾಕ್ಟರ್ಗೆ ರಸ್ತೆಯಲ್ಲಿ ಕ್ರೂಡ್ ಆಯಿಲ್ ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಲಾರಿ ಚಾಲಕನಿಗೆ ಗಂಭೀರವಾಗಿ ಗಾಯಗೊಂಡಿದ್ದು. ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಆಸ್ಪತ್ರೆ ಶವಗಾರದಲ್ಲಿ ತಂದೆ , ಮದುವೆ ಸಂಭ್ರಮದಲ್ಲಿ ಮಗಳು : ಏನಿದು ಹೃದಯಾವಿದ್ರಾವಕ ಘಟನೆ
ಅಪಘಾತದಿಂದ ಕ್ರೂಡ್ ಆಯಿಲ್ ತುಂಬಿಸಿದ್ದ ಬ್ಯಾರೆಲ್ಗಳು ರಸ್ತೆಯ ಮೇಲೆ ಬಿದ್ದಿದ್ದು. ಹತ್ತಾರು ಬ್ಯಾರಲ್ ಆಯಿಲ್ ರಸ್ತೆ ಮೇಲೆ ಹರಿದಿದೆ. ಆಯಿಲ್ ತುಂಬಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.