ಹುಬ್ಬಳ್ಳಿ : ಕಾರ್ಪೋರೇಷನ್ ಕಸದ ಗಾಡಿಗೆ ಬೈಕ್ ಡಿಕ್ಕಿಯಾಗಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಹುಬ್ಬಳ್ಳಿಯ ಹಿಮ್ಸ್ ಆಸ್ಪತ್ರೆ ಹಿಂಭಾಗದಲ್ಲಿ ಘಟನೆ ನಡೆದಿದ್ದು. ಯುವಕ ಅಧ್ವೈತ್ ಮತ್ತು ಆತನ ಸ್ನೇಹಿತ ಇಬ್ಬರು ಬೈಕ್ನಲ್ಲಿ ಕೋಚಿಂಗ್ ಕ್ಲಾಸ್ಗೆ ತೆರಳುತ್ತಿದ್ದರು. ಈ ವೇಳೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಸದ ಗಾಡಿಗೆ ಬೈಕ್ ಡಿಕ್ಕಿಯಾಗಿ 18 ವರ್ಷದ ಅಧ್ವೈತ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರ ವಿವೇಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಮಾಜಿ ಗೆಳತಿ ಪೋಟೊ ಜೊತೆ ಟ್ರೋಲ್ ಆದ ರಜತ್ : ಸೈಬರ್ ಠಾಣೆ ಮೆಟ್ಟಿಲೇರಿದ ರಜತ್ ಪತ್ನಿ !
ಗಾಯಾಳು ವಿವೇಕ್ಗೆ ಹುಬ್ಬಳ್ಳಿಯ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.