Saturday, January 18, 2025

ಪ್ರೀತಿಸುವ ನೆಪದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳೊಂದಿಗೆ ಕಾಮದಾಟ : ವಿಕೃತ ಕಾಮಿ ಅರೆಸ್ಟ್​ !

ಹುಬ್ಬಳ್ಳಿ : ಪ್ರೀತಿಸುವ ನೆಪದಲ್ಲಿ ಬಡ ಹೆಣ್ಣು ಮಕ್ಕಳ ಜೊತೆ ಪಲ್ಲಂಗದಾಟವಾಡಿ, ಅದರ ದೃಷ್ಯಗಳನ್ನು ತನ್ನ ಮೊಬೈಲ್​ ಕ್ಯಾಮರದಲ್ಲಿ ಚಿತ್ರಿಕರಿಸಿಕೊಂಡು ಬ್ಲಾಕ್​ಮೇಲ್​ ಮಾಡುತ್ತಿದ್ದ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದು. ಬಂಧಿತ ಆರೋಪಿಯನ್ನು ಅಶ್ಪಾಕ್ ಜೋಗನ್‌ಕೊಪ್ಪ ಎಂದು ಗುರುತಿಸಲಾಗಿದೆ.

ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಝರಾಕ್ಸ್ ಮತ್ತು ಮೊಬೈಲ್ ರೀಚಾರ್ಜ್ ಸ್ಟೋರ್ ಇಟ್ಟುಕೊಂಡಿದ್ದ ಅಶ್ಪಾಕ್ ಜೋಗನ್‌ಕೊಪ್ಪ . ತನ್ನ ಅಂಗಡಿಗೆ ಬರುವ ಹೆಣ್ಣು ಮಕ್ಕಳನ್ನು ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದನು ಎಂದು ಆರೋಪಿಸಲಾಗಿದೆ. ಹಣದಾಸೆ ಮತ್ತು ಪ್ರೀತಿಸುವ ನಾಟಕವಾಡಿ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುತ್ತಿದ್ದ ಆಸಾಮಿ ಅವರ ಮೇಲೆ ಅತ್ಯಾಚಾರವೆಸಗುವ ಪೋಟೋಗಳು ಮತ್ತು ವಿಡಿಯೋಗಳನ್ನು ಚಿತ್ರಿಕರಿಸಿ ಕೊಳ್ಳುತ್ತಿದ್ದನು.

ಇದನ್ನೂ ಓದಿ: ಹೆಂಡತಿಯ ಅಕ್ರಮ ಸಂಬಂಧಕ್ಕೆ ಬಿತ್ತು ಗಂಡನ ಹೆಣ !

ಇಷ್ಟೆ ಅಲ್ಲದೆ ಹೆಣ್ಣು ಮಕ್ಕಳಿಗೆ ವಿಡಿಯೋ ಕರೆ ಮಾಡಿ ಅದರಲ್ಲಿ ಬೆತ್ತಲಾಗುವಂತೆ ಪೀಡಿಸುತ್ತಿದ್ದ ಇತ, ಅವುಗಳನ್ನು ತನ್ನ ಮೊಬೈಲ್​ನಲ್ಲಿ ಚಿತ್ರಿಕರಿಸಿಕೊಳ್ಳುತ್ತಿದ್ದನು. ಈ ವಿಡಿಯೋಗಳನ್ನು ರೆಕಾರ್ಡ್​ ಮಾಡಿಕೊಳ್ಳುತ್ತಿದ್ದ ಈತ ತಾನು ಹೇಳಿದಂತೆ ಕೇಳು ಇಲ್ಲದಿದ್ದರೆ ವಿಡಿಯೋಗಳನ್ನು ಬೇರೆಯವರಿಗೆ ಕಳಿಸುವ ಬೆದರಿಕೆ ಹಾಕುತ್ತಿದ್ದ.

ಈತನ ಕೃತ್ಯದ ಬಗ್ಗೆ ಅಪ್ರಾಪ್ತ ಬಾಲಕಿಯ ಪೋಷಕರು ಹುಬ್ಬಳ್ಳಿಯ ಕಸಬಾ ಪೋಲಿಸ್​ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ. ದುಷ್ಕರ್ಮಿಯನ್ನು ಪೊಲೀಸ್​ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಜೊತೆಗೆ ಆರೋಪಿಯ ಮೊಬೈಲ್​ ಪೋನ್​ನ್ನು ಪರಿಶೀಲಿಸಿದಾಗ 10ಕ್ಕೂ ಹೆಚ್ಚು ಮಕ್ಕಳ ಜೊತೆ , ಮಹಿಳೆಯರ ಜೊತೆ ಕಾಮದಾಟ ಆಡಿರುವ ವಿಡಿಯೋಗಳು ಸಿಕ್ಕಿವೆ ಎಂದು ಮಾಹಿತಿ ದೊರೆತಿದೆ.

ಪೊಲೀಸರ ವಿಚಾರಣೆಯಲ್ಲಿ ಈ ವಿಕೃತ ಕಾಮಿ ಕೃತ್ಯಗಳು ಹೊರಗೆ ಬಂದಿದ್ದು. ಪೊಲೀಸರ ಈ ಕಾರ್ಯ ಅದೆಷ್ಟೋ ಹೆಣ್ಣು ಮಕ್ಕಳ ಜೀವನವನ್ನು ಉಳಿಸಿದೆ.

RELATED ARTICLES

Related Articles

TRENDING ARTICLES