ತುಮಕೂರು : ಆನ್ಲೈನ್ ಗೇಮ್ ಆಡಬೇಡ ಎಂದು ಹೇಳಿದ್ದಕ್ಕೆ ಮನನೊಂದ ಯುವಕನೋರ್ವ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದ್ದು. ಮೃತ ಯುವಕನನ್ನು ಟಿ.ಎಸ್ ಭರತ್ ಎಂದು ಗುರುತಿಸಲಾಗಿದೆ.
ತುಮಕೂರು ನಗರದ ಹೊರಪೇಟೆಯ ಬಾರ್ ಲೈನ್ ರಸ್ತೆಯಲ್ಲಿ ಘಟನೆ ನಡೆದಿದ್ದು. ಭರತ್ ಆನ್ಲೈನ್ ಗೇಮ್ಗಳಲ್ಲಿ ಹಣವನ್ನು ಹಾಕಿ ಆಟವಾಡುತ್ತಿದ್ದ. ಇತ್ತೀಚೆಗೆ ಆನ್ಲೈನ್ ಗೇಮ್ನಿಂದ 20 ಸಾವಿರ ಹಣವನ್ನು ಕಳೆದುಕೊಂಡಿದ್ದನು. ಇದನ್ನು ತಿಳಿದಿದ್ದ ಭರತ್ ತಾಯಿ ಮಗನಿಗೆ ಇನ್ನು ಮುಂದೆ ಆನ್ಲೈನ್ ಗೇಮ್ಗಳನ್ನು ಆಡದಂತೆ ಬೈದು ಬುದ್ದಿ ಹೇಳಿದ್ದರು.
ಇದನ್ನೂ ಓದಿ : ಬಂದೂಕು ತೋರಿಸಿ ಬ್ಯಾಂಕ್ ರಾಬರಿ ಮಾಡಿದ ಖದೀಮರು !
ಇದರಿಂದ ಮನನೊಂದ ಭರತ್ ತನ್ನ ಮನೆಯ ಸಮೀಪದ ಹಳೆಯ ಹಂಚಿನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಘಟನೆ ಕುರಿತು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.