ಬೆಳಗಾವಿ : ಕಾರು ಅಪಘಾತದಲ್ಲಿ ಬೆನ್ನು ಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯದಲ್ಲಿ ನಿನ್ನೆ ಸಂಜೆ ಏರುಪೇರಾಗಿತ್ತು ಎಂದು ಲಕ್ಷ್ಮೀ ಹೆಬ್ಬಾಳ್ಕರ್ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ರವಿ ಪಾಟೀಲ್ ಹೇಳಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯ ವಿಚಾರವಾಗಿ ಮಾತನಾಡಿದ ವೈದ್ಯ ರವಿ ಪಾಟೀಲ್ ‘ ಕಾರು ಅಪಘಾತದಲ್ಲಿ ಆಗಿ ನಾಲ್ಕು ದಿನ ಆಯ್ತು. ಈ ಅಪಘಾತದಲ್ಲಿ ನಾಲ್ಕು ಜನ ಗಾಯಗೊಂಡಿದ್ದರು. ಈ ಅಪಘಾತದಲ್ಲಿ ಗಾಯಗೊಂಡಿದ್ದ ಚನ್ನರಾಜ ಹಟ್ಟಿಹೊಳಿ ಗುಣಮುಖರಾಗಿದ್ದಾರೆ. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆನ್ನು ಮೂಳೆ ಮುರಿದಿದ್ದು, ಮೆದುಳು ಊದಿಕೊಂಡಿದೆ. ಇದಕ್ಕೆ ಚಿಕಿತ್ಸೆ ನೀಡಿದ್ದೇವೆ. ಅವರಿಗೆ ಕನಿಷ್ಟ 48 ಗಂಟೆಗಳ ಕಾಲ ಕಂಪ್ಲೀಟ್ ರೆಸ್ಟ್ ಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ : ಕೆನಡಾ ಪ್ರಧಾನಿ ರೇಸ್ನಲ್ಲಿ ಕನ್ನಡಿಗ : ‘ಎಲ್ಲಾದರು ಇರು, ಎಂತಾದರು ಇರು, ಕನ್ನಡವಾಗಿರು ಎಂದ’ ಚಂದ್ರಆರ್ಯ
ಮುಂದುವರಿದು ಮಾತನಾಡಿದ ವೈದ್ಯ ರವಿ ಪಾಟೀಲ್ ‘ಅವರನ್ನು ನೋಡಲು ಅವರ ಅಭಿಮಾನಿಗಳು ದಿನನಿತ್ಯ ಬರುತ್ತಿದ್ದಾರೆ. ಆದರೆ ಅವರಿಗೆ ಕಂಪ್ಲೀಟ್ 48 ಗಂಟೆಗಳ ಕಾಳ ರೆಸ್ಟ್ ಬೇಕಿದೆ. ನಿನ್ನೆ ಸಂಜೆ ತಲೆ ನೋವು, ತಲೆ ಸುತ್ತು ಬರುವುದು ಹೆಚ್ಚಾಗಿತ್ತು. ಕುತ್ತಿಗೆ ಭಾಗಕ್ಕೆ ಪೆಟ್ಟು ಬಿದ್ದಿರುವುದರಿಂದ ಕತ್ತಿನಲ್ಲಿ ಬಾವು ಕಾಣಿಸಿಕೊಂಡಿದೆ. ಅವರಿನ್ನು 4 ದಿನ ಆಸ್ಪತ್ರೆಯಲ್ಲಿರಬೇಕು. ಆದರೆ ಭಾನುವಾರ ಅವರನ್ನು ಡಿಸ್ಚಾರ್ಜ ಮಾಡುತ್ತೇವೆ. ಆದರೆ ಅವರನ್ನೂ ಭೇಟಿ ಮಾಡಲು ಬರುವವರ ಸಂಖ್ಯೆ ಹೆಚ್ಚಾಗಿದ್ದು. ರಾಜಕಾರಣಿಗಳು ಬರದಂತೆ ಮಾಧ್ಯಮದ ಮುಖಾಂತರ ಮನವಿ ಮಾಡಿದರು.