ಮೈಸೂರು : ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಶ್ರೀಗಳನ್ನು ಭೇಟಿ ಮಾಡಿದ ನಂತರ ಹೊರಗೆ ಬಂದು ಮಾಧ್ಯಮದ ಜೊತೆಗೆ ಮಾತನಾಡಿದರು. ಈ ವೇಳೆ ನಾನೇ ಬಿಜೆಪಿ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತರುತ್ತೇನೆ. ಇದರ ಅರ್ಥ ನಾನೇ ರಾಜ್ಯಧ್ಯಕ್ಷರಾಗಿ ಮುಂದುವರಿಯುತ್ತೇನೆ ಎಂದು ಅರ್ಥ ತಾನೇ ಎಂದು ಹೇಳಿದರು.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ, ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕನ್ಕ್ಲೇವ್ನಲ್ಲಿ ಭಾಗವಹಿಸಲಿದ್ದಾರೆ . ಇದಕ್ಕೂ ಮುನ್ನ ಮಾಧ್ಯಮದ ಜೊತೆ ಮಾತನಾಡಿದ ಬಿವೈ ವಿಜಯಯೇಂದ್ರ ‘ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟುತ್ತೇನೆ ಮತ್ತು ಅಧೀಕಾರಕ್ಕೆ ತರುತ್ತೇನೆ. ಅಂದರೆ ನಾನೇ ರಾಜ್ಯಧ್ಯಕ್ಷನಾಗಿ ಮುಂದುವರಿಯುತ್ತೇನೆ ಅಂಥ.
ಇದನ್ನೂ ಓದಿ :ಜೈ ಶಂಕರ್ಗೆ ಮೈಸೂರ್ಪಾಕ್ ತಿನ್ನಿಸಿ ಧನ್ಯವಾದ ಅರ್ಪಿಸಿದ ಸಂಸದ ಸೂರ್ಯ : ಏಕೆ ಗೊತ್ತೇ !
ಬಿಜೆಪಿಯಲ್ಲಿರುವ ಎಲ್ಲಾ ಗೊಂದಲಗಳು ಆದಷ್ಟು ಬೇಗ ಬಗೆಹರಿಯುತ್ತವೆ. ಭಿನ್ನಮತಿಯರ ಮಾತುಗಳು ಕೂಡ ನಿಲ್ಲುತ್ತವೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಕಟ್ಟುತ್ತೇನೆ. ಒಂದು ವರ್ಷ ಯಶಸ್ವಿಯಾಗಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದ್ದೇನೆ. ಮುಂದೇಯು ಕೂಡ ಇದೇ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಇದರಲ್ಲಿ ಯಾವ ಅನುಮಾನಗಳು ಕೂಡ ಬೇಡ ಎಂದು ವಿಜಯೇಂದ್ರ ಹೇಳಿದರು.