Friday, January 17, 2025

ಹಿಂಡನ್​ಬರ್ಗ್​ ಸಂಸ್ಥೆ ಕಾರ್ಯಚರಣೆ ಸ್ಥಗಿತ : ಅದಾನಿಯನ್ನೆ ಅಲುಗಾಡಿಸಿದವರಿಗೆ ಏನಾಯಿತು !

ದೆಹಲಿ: ಗೌತಮ್​ ಅದಾನಿ ಸೇರಿದಂತೆ ಹಲವು ಕಾರ್ಪೋರೇಟ್​ ದೈತ್ಯರ ಅಕ್ರಮಗಳನ್ನು ಬಯಲಿಗೆ ಎಳೆದಿದ್ದ ಅಮೇರಿಕಾದ ಹಿಂಡನ್​ಬರ್ಗ್​ ರಿಸರ್ಚ್​ ಸಂಸ್ಥೆ ತನ್ನ ಕಾರ್ಯಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ಹೇಳಿದ್ದರು. ಈ ಬಗ್ಗೆ ಸಂಸ್ಥೆಯ ಸಂಸ್ಥಾಪಕ ನಾಟೆ ಆ್ಯಂಡರ್ಸನ್ ಘೋಷಿಸಿದ್ದಾರೆ.

ಹಿಂಡನ್​ ಬರ್ಗ್​ ಸಂಸ್ಥೆಯನ್ನು ಮುಚ್ಚುವ ಕುರಿತು ತಮ್ಮ ವೆಬ್​ಸೈಟ್​ನಲ್ಲಿ ಪೋಸ್ಟ್​ ಮಾಡಿರುವ ಆ್ಯಂಡರ್ಸನ್​, ಜಗತ್ತಿನಲ್ಲಿ ಅನೇಕ ವಿಚಾರಗಳನ್ನು ಹಾಗೂ ನಾನು ಕಾಳಜಿ ವಹಿಸುವ ವ್ಯಕ್ತಿಗಳನ್ನು ನಾನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಈ ನಿರ್ಧಾರ ತೆಗೆದುಕೊಳ್ಳಲು 2024ರ ಅಂತ್ಯದಿಂದಲೆ ನನ್ನ ಕುಟುಂಬ ಮತ್ತು ತಂಡದೊಂದಿಗೆ ಚರ್ಚಿಸಿದ್ದೇನೆ. ಈ ಕುರಿತು ಅಂತಿಮ ವಿಚಾರಗಳು ಪೂರ್ಣಗೊಂಡಿದ್ದು, ನಿಯಮಾವಳಿಗಳಂತೆ ಇಂದು ಈ ಕುರಿತು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಸ್ಥಾನಮಾನ ಎಂಬುದು ಅಂಗಡಿಯಲ್ಲಿ ಸಿಗಲ್ಲ, ಹೈಕಮಾಂಡ್​ ಬಳಿಯಲ್ಲಿ ಮಾತನಾಡಲಿ : ಡಿಕೆಶಿ !

ನಮ್ಮ ತಂಡದಲ್ಲಿರುವ ಪ್ರತಿಯೊಬ್ಬರು ಮುಂದೆ ತಮ್ಮಿಷ್ಟದಂತೆ ಎಲ್ಲಿರಬೇಕು ಎಂದು ನಿರ್ಧರಿಸುತ್ತಾರೆಯೋ ಅದಕ್ಕೆ ಸಹಕಾರ ನೀಡಿ ಗಮನ ಹರಿಸಲಾಗುವುದು. ಕೆಲವರು ತಮ್ಮದೇ ಸ್ವಂತ ಸಂಶೋಧನಾ ಘಟನೆ ಸ್ಥಾಪಿಸಬೇಕು ಎಂದಿದ್ದಾರೆ. ಇದರಲ್ಲಿ ನಾನು ವೈಯಕ್ತಿಕವಾಗಿ ತೊಡಗಿಕೊಳ್ಳದಿದ್ದರೂ ದೃಢವಾಗಿ ಮತ್ತು ಸಾರ್ವಜನಿಕವಾಗಿ ಅವರಿಗೆ ಪ್ರೋತ್ಸಾಹ ನೀಡುತ್ತೇನೆ. ಮತ್ತೆ ಕೆಲವರು ಸ್ವತಂತ್ರ ಏಜೆಂಟ್​ ಆಗಿ ಕಾರ್ಯ ನಿರ್ವಹಿಸಬೇಕು ಎಂದಿದ್ದಾರೆ. ಅವರು ಅಗತ್ಯವಿದ್ದಲ್ಲಿ ಮುಕ್ತವಾಗಿ ನನ್ನನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ಅದಾನಿ ಗ್ರೂಪ್‌ ತನ್ನ ಕಂಪನಿಯ ಷೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಿಸಲು ಬಳಸಿದ ಮಾರಿಷಸ್‌ ನಿಧಿಯಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್‌ ಪಾಲು ಹೊಂದಿದ್ದಾರೆ ಎಂದು ಹಿಂಡನ್‌ಬರ್ಗ್ 2024ರಲ್ಲಿ ಆರೋಪ ಮಾಡಿತ್ತು. ಇದು ಷೇರುಪೇಟೆಯಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಿತ್ತು. ಇದರಿಂದಾಗಿ ಅದಾನಿ ಗ್ರೂಪ್‌ ಷೇರುಗಳಲ್ಲಿ ಭಾರೀ ಕುಸಿತ ಉಂಟಾಗಿತ್ತು.

RELATED ARTICLES

Related Articles

TRENDING ARTICLES