ಬೆಂಗಳೂರು : ಕನ್ನಡದ ಹಿರಿಯ ನಟ ಸರಿಗಮ ವಿಜಿ ಅಂತ್ಯಕ್ರಿಯೆ ಇಂದು (ಜ.16) ಬಲಿಜ ಸಂಪ್ರದಾಯದಂತೆ ನೆರವೇರಿದ್ದು. ಚಾಮರಾಜಪೇಟೆ ಚಿತಾಗರಾದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ವಿಜಿ ಅವರ ಹಿರಿಯ ಪುತ್ರ ರೋಹಿತ್ ತಮ್ಮ ತಂದೆಯ ಕೊನೆಯ ವಿಧಿ ವಿಧಾನಗಳನ್ನು ನೆರವೇರಿಸಿ, ತಂದೆಯ ಚಿತೆಗೆ ಅಗ್ನಿ ಸ್ಪರ್ಷ ಮಾಡಿದರು.
ಶ್ವಾಸ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಸರಿಗಮ ವಿಜಿ ಅವರು ಕಳೆದ ಎಂಟತ್ತು ದಿನಗಳಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದರು.
ಇದನ್ನೂ ಓದಿ :ದನ ತಿನ್ನುವ ಸಾಬರಿಗೆ ಸರ್ಪೋಟ್ ಮಾಡುವುದನ್ನು ನಿಲ್ಲಿಸಿ : ಪ್ರತಾಪ್ ಸಿಂಹ !
ಇಂದು ಮುಂಜಾನೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ನಟನ ಅಂತಿಮ ನಮನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿಜಯೇಂದ್ರ, ಚಲವಾದಿ ನಾರಾಯಣಸ್ವಾಮಿ, ನಟ ಧ್ರುವ ಸರ್ಜಾ, ಹಿರಿಯ ನಟ ಸುಂದರ್ ರಾಜ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ನಟಿ ರೂಪಿಕಾ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದ್ದರು.