Thursday, January 16, 2025

ಇಸ್ರೋದಿಂದ ಐತಿಹಾಸಿಕ ಸಾಧನೆ : ಸ್ಪೇಸ್​ ಡಾಕಿಂಗ್​ ಮಾಡಿದ ವಿಶ್ವದ 4ನೇ ರಾಷ್ಟವಾದ ಭಾರತ !

ಬೆಂಗಳೂರು: ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ) ಐತಿಹಾಸಿಕ ಸಾಧನೆ ಮಾಡಿದ್ದು. ಬಾಹ್ಯಾಕಾಶ ಉಪಗ್ರಹಗಳ ಡಾಕಿಂಗ್​ ಮತ್ತು ಅನ್​ಡಾಕಿಂಗ್​ ಪ್ರಯೋಗವನ್ನು ಮಾಡುವ ಮೂಲಕ ಈ ಪ್ರಯೋಗವನ್ನು ಯಶಸ್ವಿಗೊಳಿಸದ ಪ್ರಪಂಚದ ನಾಲ್ಕನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಭಾರತಕ್ಕೂ ಮೊದಲು ಈ ಪ್ರಯೋಗವನ್ನು ಅಮೇರಿಕಾ, ರಷ್ಯಾ ಮತ್ತು ಚೀನಾ ದೇಶಗಳು ಮಾಡಿದ್ದವು. ಇವೆಲ್ಲದರ ನಂತರ ಈ ಪ್ರಯೋಗದಲ್ಲಿ ಯಶಸ್ಸು ಕಂಡ ನಾಲ್ಕನೇ ದೇಶವಾಗಿ ಭಾರತ ಹೊರಬಂದಿದೆ.

ಇದನ್ನೂ ಓದಿ :ATMಗೆ ಹಣ ಹಾಕುವ ಸಿಬ್ಬಂದಿ ಮೇಲೆ ಫೈರಿಂಗ್‌ : ಸಿನಿಮೀಯ ರೀತಿಯ ದರೋಡೆಯಲ್ಲಿ ಓರ್ವ ಸಾ*ವು!

ಏನಿದು ಪ್ರಯೋಗ?

ಇಸ್ರೋ ನಡೆಸಿರುವ ಈ ಸ್ಯಾಟಲೈಟ್​ ಡಾಕಿಂಗ್​ ವ್ಯವಸ್ಥೆ ಎಂದರೆ ‘ ಉಪಗ್ರಹಗಳು ತಮ್ಮಲ್ಲಿರುವ ಸೆನ್ಸರ್​ ವ್ಯವಸ್ಥೆಯನ್ನು ಬಳಸಿಕೊಂಡು ಜೋಡಣೆ ಆಗುವಂತೆ ಮಾಡುವುದಾಗಿದೆ. ಈ ಪ್ರಯೋಗಕ್ಕೆ ಇಸ್ರೋ ಸ್ಪೇಸ್​ ಡಾಕಿಂಗ್​ ಎಕ್ಷ್​ಪೆರಿಮೆಂಟ್​ ಎಂದು ಹೆಸರಿಟ್ಟಿತ್ತು. ತಲಾ220 ಕೆಜಿ ತೂಗುವ ಸ್ಪೇಡೆಕ್ಸ್‌ 1 ಮತ್ತು ಸ್ಪೇಡೆಕ್ಸ್‌ 2 ನೌಕೆಗಳನ್ನು ಪರಸ್ಪರ ಕೇವಲ  15 ಮೀಟರ್‌ ಅಂತರಕ್ಕೆ ಆರಂಭದಲ್ಲಿ ತರಲಾಗಿತ್ತು. ನಂತರ  3 ಮೀಟರ್‌ ಸನಿಹಕ್ಕೆ ತಂದ ಬಳಿಕ ಈ ಡಾಕಿಂಗ್‌ ಪ್ರಕ್ರಿಯೆ ಆರಂಭಿಸಿತ್ತು.

ಇಸ್ರೋ ಜ.7 ಮತ್ತು 8 ರಂದು ಪ್ರಯೋಗ ಮಾಡಲು ಮುಂದಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಪ್ರಯೋಗವನ್ನು ಮುಂದೂಡಿತ್ತು. ಜ.12 ರಂದು ಪ್ರಯೋಗ ಆರಂಭಿಸಿತ್ತು. ಇದೀಗ ಈ ಪ್ರಯೋಗ ಯಶಸ್ವಿಯಾಗಿದೆ.

ಈ ಪ್ರಯೋಗ ಮುಂಬರುವ ಭಾರತದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಬಹಳಷ್ಟು ಸಹಕಾರಿಯಾಗಲಿದ್ದು. ಭಾರತದ ಭವಿಷ್ಯದ ಯೋಜನೆಗಳಾದ ಮಾನವ ಸಹಿತ ಗಗನಯಾನ, ಮಾನವ ಸಹಿತ ಚಂದ್ರಯಾನ ಮತ್ತು ಬಾಹ್ಯಾಕಾಶ ನಿಲ್ದಾಣಗಳನ್ನು ಸ್ಥಾಪಿಸಲು. ಈ ಪ್ರಯೋಗ ಮತ್ತಷ್ಟು ಸಹಕಾರಿಯಾಗಲಿದೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES