Wednesday, January 15, 2025

ನೌಕಾಪಡೆಗೆ ಮತ್ತಷ್ಟು ಬಲ ತುಂಬಿದ ಮೋದಿ : ಹೊಸ ನೌಕೆಗಳ ಸ್ಪೆಷಾಲಿಟಿ ಏನು ಗೊತ್ತಾ !

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಮುಂಬೈನ  ನೌಕಾನೆಲೆಯಲ್ಲಿ ಮೂರು ಸುಧಾರಿತ ಯುದ್ಧ ನೌಕೆಗಳಾದ ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘ್‌ಶೀರ್ ಅನ್ನು ದೇಶಕ್ಕೆ ಸಮರ್ಪಿಸಿದರು. ಈ ಕಾರ್ಯಾರಂಭವು ಭಾರತದ ರಕ್ಷಣಾ ಉತ್ಪಾದನೆ ಮತ್ತು ಕಡಲ ಭದ್ರತಾ ಉಪಕ್ರಮಗಳಲ್ಲಿ ಮಹತ್ವದ ದಾಪುಗಾಲು ಹಾಕಿದೆ.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಇಂದು, ಭಾರತವು ಜಾಗತಿಕವಾಗಿ, ವಿಶೇಷವಾಗಿ ಜಾಗತಿಕ ದಕ್ಷಿಣದಲ್ಲಿ ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಪಾಲುದಾರನಾಗಿ ಗುರುತಿಸಲ್ಪಟ್ಟಿದೆ. ಭಾರತವು ಅಭಿವೃದ್ದಿಯಲ್ಲಿ ಉತ್ಸಾಹದಿಂದ ಕಾರ್ಯನಿರ್ವಹಿಸಿದೆಯೆ ಹೊರತು ವಿಸ್ತರಣೆಯಲ್ಲಿ ಅಲ್ಲ, ಭಾರತವು 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಇಂದು ರಕ್ಷಣಾ ಸಾಮಾಗ್ರಿಗಳನ್ನು ಪೂರೈಕೆ ಮಾಡುತ್ತಿದೆ. ನಾವು ಸಮುದ್ರವನ್ನು, ಡ್ರಗ್ಸ್​, ಅಕ್ರಮ ಶಸ್ತ್ರಾಸ್ತ, ಭಯೋತ್ಪಾದನೆಯಿಂದ ರಕ್ಷಿಸಲು ಜಾಗತಿಗ ಪಾಲುದಾರನಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ: ಪ್ರೇಯಸಿಯೊಂದಿಗೆ ಜಗಳ : ಖಾಸಗಿ ಪೋಟೋಗಳನ್ನು ಶೇರ್​ ಮಾಡಿ, ಕೆರೆಗೆ ಹಾರಿದ ಯುವಕ ಸಾ*ವು !

ಮೂರು ಯುದ್ದ ನೌಕೆಗಳ ವಿಶೇಷತೆಗಳು !

  • INS ಸೂರತ್​ !

INS ಸೂರತ್​ ಹಡಗು ಶೇಕಡಾ 75ರಷ್ಟು ದೇಶಿಯ ತಂತ್ರಜ್ಙನದೊಂದಿಗೆ ನಿರ್ಮಿಸಿದ್ದು. ಜಾಗತಿಕವಾಗಿ ಇರುವ ಅತ್ಯಾಧುನಿಕ ಯುದ್ದ ನೌಕೆಗಳಲ್ಲಿ ಒಂದಾಗಿದೆ. ಈ ನೌಕೆಯಲ್ಲಿ ಅತ್ಯಾಧುನಿಕ ರಾಡರ್ ಸಿಸ್ಟಮ್​ ಸೇರಿದಂತೆ, ಸುಧಾರಿತ ನೆಟ್​ವರ್ಕ್​ ಕೇಂದ್ರಿತ ಸಾಮರ್ಥ್ಯಗಳನ್ನು ಹೊಂದಿದ್ದು. ಈ ನೌಕೆ ಒಟ್ಟು ತೂಕ 7400 ಟನ್​ಗಳಷ್ಟಿದ್ದು. ಸುಮಾರು 164 ಮೀಟರ್​ ಉದ್ದವಿದೆ. ಈ ನೌಕೆಯಲ್ಲಿ AI ಸುಧಾರಿತ ಟೆಕ್ನಾಲಜಿ ಇದ್ದು. ಈ ನೌಕೆಯ ಸೇರ್ಪಡೆಯಿಂದ ಜಾಗತಿಕವಾಗಿ ಭಾರತದ ಸ್ಥಾನವನ್ನು ಇನ್ನಷ್ಟು ಬಲಗೊಳಿಸಲಿದೆ.

  • INS ವಾಘಶಿರ್​ ಜಲಾಂರ್ತಗಾಮಿ !

INS ವಾಘಶಿರ್​ ಜಲಾಂರ್ತಗಾಮಿಯನ್ನು ಫ್ರಾನ್ಸ್​​ ಸಹಯೋಗದೊಂದಿಗೆ ನಿರ್ಮಿಸಲಾಗಿದ್ದು. ಆ್ಯಂಟಿ ಸರ್ಫೇಸ್​​ ಮತ್ತು ಜಲಾಂರ್ತರ್​ಗಾಮಿ ನಿರೋಧಕ ವ್ಯವಸ್ಥೆಯನ್ನು ಇದು ಹೊಂದಿದೆ. ಜೊತೆಗೆ ಕಣ್ಗಾವಲು ಸಾರ್ಮಾರ್ಥ್ಯವನ್ನು ಹೊಂದಿದೆ. ಈ ಜಲಾಂತರ್ಗಾಮಿ ಭಾರತೀಯ ನೌಕಾಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ನೌಕೆ 67 ಮೀಟರ್ ಉದ್ದ ಮತ್ತು 1,550 ಟನ್ ಬಾರ ಹೊಂದಿದೆ. ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಈ ರಕ್ಷಣಾ ನೌಕೆಗಳು ಭಾರತದ ಸೇನೆಗೆ ಮತ್ತಷ್ಟು ಬಲವನ್ನು ತುಂಬಿದೆ.

  • INS​ ನೀಲಗಿರಿ !

ಪಿ17ಎ ಸ್ಟೆಲ್ತ್​​ ಫ್ರಿಗೇಟ್​ ಪ್ರಾಜೆಕ್ಟ್​​ನ ಮೊದಲ ಶಿಪ್​ ಆಗಿದ್ದು, ಇದನ್ನು ಭಾರತೀಯ ನೌಕ ವಾರ್ಶಿಪ್​​ ಡಿಸೈನ್​ ಬ್ಯುರೋ ವಿನ್ಯಾಸ ಮಾಡಿದೆ. ಇದು ಸಾಗರ ಮೇಲ್ವಿಚಾರಣೆಗಾಗಿಯೇ ಅಭಿವೃದ್ಧಿ ಮಾಡಲಾಗಿದ್ದು, ದೇಶೀಯ ಫ್ರಿಗೇಟ್​​ನ ಮುಂದಿನ ಪೀಳಿಗೆಯನ್ನು ಪ್ರತಿಬಿಂಬಿಸುತ್ತದೆ. ಇದು ಎಂಟು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಒಳಗೊಂಡಂತೆ ಸುಧಾರಿತ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. 8 ಸೆಪ್ಟೆಂಬರ್ 2019 ರಂದು ಪ್ರಾರಂಭಿಸಲಾಯಿತು. ಈ ನೌಕೆ ಸುಮಾರು 6,670 ಟನ್ ತೂಕ ಹೊಂದಿದ್ದು, 149 ಮೀಟರ್ ಉದ್ದ ಹೊಂದಿದೆ.

RELATED ARTICLES

Related Articles

TRENDING ARTICLES