Wednesday, January 15, 2025

ತವರು ಮನೆ ಸೇರಿದ್ದ ಹೆಂಡತಿಯನ್ನು ಕಿಡ್ನಾಪ್​ ಮಾಡಿದ ಗಂಡ !

ದಾವಣಗೆರೆ : ಗಂಡನ ಮನೆಯ ಕಿರುಕುಳದಿಂದ ಬೇಸತ್ತು ತವರು ಮನೆ ಸೇರಿದ್ದ ಪತ್ನಿಯನ್ನು ಸಿನಿಮೀಯ ರೀತಿಯಲ್ಲಿ ಹೊತ್ತೊಯ್ದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಗಂಡ ಕಾರ್ತಿಕ್​, ತನ್ನ ಹೆಂಡತಿ ಆರುಂಧತಿಯನ್ನು ಎಳೆದುಕೊಂಡು ಹೋಗಿದ್ದಾನೆ. ಘಟನೆಯ ದೃಷ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು.

ಭಾನುಮತಿ ಹಾಗೂ ಲೇಟ್ ನರಸಿಂಹಮೂರ್ತಿಯವರ ಸಾಕುಮಗಳು ಅರುಂದತಿ. ಅರುಂಧತಿ ತಂದೆ ತಾಯಿ ಇಬ್ಬರೂ ಕೊರೋನಾ ವೇಳೆ ಮೃತಪಟ್ಟಿದ್ದಾರೆ, ಆದ್ದರಿಂದ ಅರುಂಧತಿ ತನ್ನ ಸೋದರತ್ತೆಯ ಆಶ್ರಯದಲ್ಲಿ ಇದ್ದಳು, ಕಳೆದ ನಾಲ್ಕು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ನರಸೀಪುರದ ಕಾರ್ತಿಕ ಬಿನ್‌ ಕೃಷ್ಣಸ್ವಾಮಿ ಜೊತೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಅಚಿಂತ್ಯ ಎಂಬ ನಾಲ್ಕು ವರ್ಷದ ಮಗುನು ಜನಸಿದ್ದನು.

ಇದನ್ನೂ ಓದಿ : ನಾಯಿಯ ಮೇಲೆ ಕಾರು ಹತ್ತಿಸಿ ವಿಕೃತಿ : ನಾಯಿಯ ನರಳಾಟ ಕಂಡು ಕಣ್ಣೀರಿಟ್ಟ ಶ್ವಾನ ಪ್ರಿಯರು !

ಆದರೆ ಮಗನ ಜನನದ ನಂತರ ಅರುಂಧತಿ ಮತ್ತು ಆಕೆಯ ಗಂಡನ ನಡುವೆ ಹೊಂದಾಣಿಕೆ ಇಲ್ಲದೆ, ಗಂಡನ ಮನೆಯವರು ಆರುಂಧತಿ ಮತ್ತು ಆಕೆಯ ಮಗನನ್ನು ಮನೆಯಿಂದ ಹೊರಗೆ ಹಾಕಿದ್ದರು. ಇದರಿಂದ ಕಳೆದ 6 ತಿಂಗಳಿಂದ ಮಗನೊಂದಿಗೆ ಅರುಂಧತಿ ಹೊನ್ನಾಳಿಯ ದಿಡಗೂರಿನ ತನ್ನ ಸೋದರತ್ತೆ ಮನೆಯಲ್ಲಿ ವಾಸವಾಗಿದ್ದಳು. ಆದರೆ ಕಳೆದ ಕೆಲ ದಿನಗಳ ಹಿಂದೆ ಆಕೆಯ ಗಂಡ ಕಾರ್ತಿಕ್​ ಬಂದು ಆಕೆಯ ಮಗನನ್ನು ಕರೆದುಕೊಂಡು ಹೋಗಿದ್ದನು. ಆದರೆ ಅರುಂಧತಿ ಹೋಗಿರಲಿಲ್ಲ.

ಆದರೆ ಕಳೆದ ಎರಡು ದಿನಗಳ ಹಿಂದೆ ಮಧ್ಯಾಹ್ನ 12.20 ಸಮಯಕ್ಕೆ ಅರುಂದತಿಯ ಗಂಡ ಕಾರ್ತಿಕ, ಅವನ ತಮ್ಮ ಗಿರೀಶ, ತಂಗಿ ಕಾತ್ಯಾಯಿನಿ, ತಂದೆ ಕೃಷ್ಣಸ್ವಾಮಿ ಎಲ್ಲರು ಸೇರಿ ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ಭಾನುಮತಿ ಕುಟುಂಬದವರ ಮೇಲೆ ಹಲ್ಲೆ ನಡೆಸಿ, ಆರುಂಧತಿಯನ್ನು ದರ ದರನೆ ಎಳೆದುಕೊಂಡು ಹೋಗಿದ್ದಾರೆ.

ಕಳೆದ ಆರು ತಿಂಗಳ ಹಿಂದೆ ಅರುಂಧತಿ ಗಂಡನ ಕಿರುಕುಳದಿಂದ ಬೇಸತ್ತಿದ್ದಳು‌.‌ ಮದುವೆ ಸಂದರ್ಭದಲ್ಲಿ 2ಲಕ್ಷ ಕ್ಯಾಶ್, 5 ತೊಲ ಬಂಗಾರ, ಎರಡು ಕೆಜಿ ಬೆಳ್ಳಿ, ಮದುವೆ ಖರ್ಚು ಭರಿಸಿ ದಾರೆ ಎರೆದಿದ್ದರು. ಭಾನುಮತಿ ಸಹೋದರನಿಗೆ ಇದ್ದ 4ಎಕರೆ ಜಮೀನು ಮಾರಾಟ ಮಾಡಿದ್ದರು. ವರದಕ್ಷಿಣೆಗಾಗಿ ಎಷ್ಟು ಅಂತ ಸಹಿಸಿಕೊಳ್ಳುವುದು ಅದಕ್ಕಾಗಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಳು. ಇದರಿಂದ ಕುಪಿತಗೊಂಡ ಕುಟುಂಬ ಮನೆ ಬಳಿ ಬಂದು ದಾಂಧಲೆ ಮಾಡಿ ನಮ್ಮ ಮೇಲೆ ಹಲ್ಲೆ ನಡೆಸಿ ಎಳೆದುಕೊಂಡು ಹೋಗಿದ್ದಾರೆ.

ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಗೆ ಭಾನುಮತಿ ಅನುಂದ್ರತಿ ಕುಟುಂಬ ದೂರು ನೀಡಿದೆ. ಇವರ ದೂರಿನ ಮೇಲೆ ಹೊನ್ನಾಳಿ ಪೊಲೀಸರು ಕೊಪ್ಪಗೆ ತೆರಳಿದ್ದಾರೆ. ಗಂಡ ಹೆಂಡತಿ ಜಗಳ ಏನೇ ಇರಲಿ ದೊಡ್ಡವರು ಕುಳಿತು ಮಾತನಾಡಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ ಅಮಾನುಷವಾಗಿ ಎಳೆದುಕೊಂಡು ಹೋಗಿದ್ದು ನಾಗರಿಕ ಸಮಾಜದಲ್ಲಿದ್ದೇವಾ ಎಂಬ ಪ್ರಶ್ನೆ ಹುಟ್ಟುಹಾಕಿದೆ…

RELATED ARTICLES

Related Articles

TRENDING ARTICLES