Wednesday, January 15, 2025

ಬೆಳಗಾವಿಯಲ್ಲಿ ಪೈಶಾಚಿಕ ಕೃತ್ಯ : ಇಬ್ಬರು ಬಾಲಕಿಯರ ಮೇಲೆ ಗ್ಯಾಂಗ್‌ ರೇಪ್‌ !

ಬೆಳಗಾವಿ : ಕುಂದಾನಗರಿಯಲ್ಲಿ ಪೈಶಾಚಿಕ ಕೃತ್ಯ ನಡೆದಿದ್ದು. ಇಬ್ಬರು ಯುವತಿಯರ ಮೇಲೆ, ಮೂರು ಯುವಕರು ಅತ್ಯಾಚಾರ ನಡೆಸಿದ್ದಾರೆ. ಹಾರಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಜನವರಿ 3ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ಬಗ್ಗೆ ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದು. ಮೂವರು ಯುವಕರಿಂದ ಈ ಪೈಶಾಚಿಕ ಕೃತ್ಯ ನಡೆದಿದೆ. ಜನವರಿ 3ರಂದು ಘಟನೆ ನಡೆದಿದ್ದು. ಜನವರಿ 13ರಂದು ನೊಂದ ಬಾಲಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡು ಆರೋಪಿಗಳನ್ನು ಬಂದಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಏನಿದು ಘಟನೆ ?

ನೊಂದ ಬಾಲಕಿಯೊಂದಿಗೆ ಆರೋಪಿ ಅಭಿಷೇಕ್​ ಎಂಬಾತ ಇನ್​ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದನು. ಪರಿಚಯದ ನಂತರ ಆಕೆಯೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದ ಆರೋಪಿ. ಸವದತ್ತಿಗೆ ಹೋಗುತ್ತಿದ್ದೇನೆ, ನೀನು ಬಾ ಎಂದು ನೊಂದ ಬಾಲಕಿಗೆ ಕರೆದಿದ್ದನು. ಇದಕ್ಕೆ ಒಪ್ಪಿದ ಬಾಲಕಿ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಹಾರೋಗೇರಿ ಬಸ್​ ನಿಲ್ದಾಣಕ್ಕೆ ಬಂದಿದ್ದಳು.

ಇದನ್ನೂ ಓದಿ :‘ರಾಮ ಮಂದಿರ ಸ್ಥಾಪನ ದಿನವೆ ನಿಜವಾದ ಸ್ವಾತಂತ್ರ್ಯ ದಿನ’ : RSS ಮುಖ್ಯಸ್ಥರನ್ನು ದೇಶದ್ರೋಹಿ ಎಂದ ರಾಹುಲ್

ಬಾಲಕಿಯರಿದ್ದ ಸ್ಥಳಕ್ಕೆ ಬಂದಿದ್ದ ಆರೋಪಿಗಳಾದ ಅಭಿಷೇಕ್, ಆದಿಲ್ ಜಮಾದಾರ್ ಮತ್ತು ಡ್ರೈವರ್ ಕೌತುಕ್ ಬಡಿಗೇರ ಬಾಲಕಿಯರನ್ನು ತಮ್ಮ ಎರ್ಟಿಗಾ ಕಾರಿನಲ್ಲಿ ಪಿಕ್​ ಮಾಡಿದ್ದರು. ಅಲ್ಲಿಂದ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಬಳಿಯ ಗುಡ್ಡಗಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ ಆರೋಪಿಗಳು. ಜನವರಿ 3ರ ಮಧ್ಯಾಹ್ನಾದ ವೇಳೆ ಗ್ಯಾಂಗ್​ ರೇಪ್​ ಮಾಡಿದ್ದಾರೆ.

ಇದನ್ನೂ ಓದಿ : ಗವಿಮಠದ ಜಾತ್ರೆಯಲ್ಲಿ ಜಿಲೇಬಿ ಹಾಕಿದ ಗವಿಶ್ರೀ : ಲಕ್ಷಾಂತರ ಭಕ್ತರಿಗೆ ದಾಸೋಹ ವ್ಯವಸ್ಥೆ !

ಈ ವೇಳೆ ಅತ್ಯಾಚಾರದ ವಿಡಿಯೋಗಳನ್ನು ಆರೋಪಿಗಳು ಚಿತ್ರಿಕರಿಸಿದ್ದು. ಈ ವಿಚಾರವನ್ನು ತಿಳಿಸಿದರೆ ವಿಡಿಯೋಗಳನ್ನು ಹರಿಬಿಡುವುದಾಗಿ ಬ್ಲಾಕ್​ ಮೇಲ್​ ಮಾಡಿದ್ದಾರೆ. ಅಷ್ಟೆ ಅಲ್ಲದೆ ಬಾಲಕಿಗೆ ಗೋವಾಕ್ಕೆ ಬರಬೇಕು ಎಂದು ಬ್ಲಾಕ್​ಮೇಲ್​ ಮಾಡಿದ್ದ ಆರೋಪಿಗಳು, ಬರದೆ ಇದ್ದರೆ ವಿಡಿಯೋ ವೈರಲ್​ ಮಾಡಿ, ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು.

ಇವೆಲ್ಲದರಿಂದ ಆಘಾತಕ್ಕೆ ಒಳಗಾಗಿದ್ದ ಬಾಲಕಿ ತನ್ನ ಸೋದರ ಸಂಬಂಧಿಯೊಂದಿಗೆ ಬಂದು ದೂರು ನೀಡದ್ದು. ಜನವರಿ 13ರಂದು ಹಾರೋಗೇರಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು 24 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು. ಇನ್ನೊಬ್ಬ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಆರೋಪಿ ಯುವಕರು ಇನ್​​ಸ್ಟಾಗ್ರಾಂನಲ್ಲಿ ಹುಡುಗಿಯರನ್ನು ಫಾಲೋ ಮಾಡುತ್ತಿದ್ದರು ಹಾಗೂ ಅವರೊಂದಿಗೆ ಸ್ನೇಹ ಬೆಳೆಸಿ ಈ ರೀತಿ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು. ಇದೀಗ ಪೊಲೀಸರು ಆರೋಪಿಗಳ ಪೋನ್​ಗಳನ್ನು ಸೀಜ್​ ಮಾಡಿದ್ದು. ಅವರ ಹಿನ್ನಲೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES