ಹುಬ್ಬಳ್ಳಿ : ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಕರುವಿನ ಮೇಲೆ ವಿಕೃತಿ ನಡೆದಿರುವ ಮಾಹಿತಿ ಲಭ್ಯವಾಗಿದ್ದು. ಕರುವಿನ ಹೊಟ್ಟೆಯನ್ನೆ ಬಗೆದಿರುವ ಸ್ಥಿತಿಯಲ್ಲಿ 7 ತಿಂಗಳ ಕರುವಿನ ಕಳೆಬರ ಪತ್ತೆಯಾಗಿದೆ.
ಹೌದು.. ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ಮಾಸುವ ಮುನ್ನವೆ ಅತ್ಯಂತ ಘೋರ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹುಬ್ಬಳ್ಳಿಯ ಬಣಗಾರ ಲೇಔಟ್ ನಲ್ಲಿ ಏಳು ತಿಂಗಳ ಆಕಳು ಕರುವಿನ ಶವ ಪತ್ತೆಯಾಗಿದ್ದು. ಸುಮಾರು 7 ತಿಂಗಳ ಕರುವಿನ ಹೊಟ್ಟೆಯನ್ನೆ ಬಗೆದಿರುವ ಘಟನೆ ನಡೆದಿದೆ. ಆದರೆ ಪಶು ವೈದ್ಯರು ಪ್ರಾಣಿ ತಿಂದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಹಸುವಿನ ಕೆಚ್ಚಲು ಕೊಯ್ದ ಪ್ರಕರಣ : ಪ್ರಾಣಿ ರಕ್ಷಣೆಗೆ ಕಂಟ್ರೋಲ್ ರೂಂ ರಚಿಸಿದ BBMP !
ಶರಣಪ್ಪ ಬಾರಕೇರ ಎಂಬುವರಿಗೆ ಸೇರಿದ ಏಳು ತಿಂಗಳು ಕರು ಸಾವನ್ನಪ್ಪಿದ್ದು.ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ. ಸತ್ತ ಕರುವಿನ ಶವವನ್ನು ಮಾಲೀಕ ಶರಣಪ್ಪ ಬಾರಕೇರ ಮರಣೋತ್ತರ ಪರೀಕ್ಷೆಗೆ ಎಂದು ತಂದಿದ್ದು. ಹುಬ್ಬಳ್ಳಿಯ ಗೋಪನಕೊಪ್ಪ ಪಶು ಆಸ್ಪತ್ರೆಗೆ ತಂದಿದ್ದಾರೆ.
ಆದರೆ ಪಶು ವೈದ್ಯರು ಮರಣೋತ್ತರ ಪರೀಕ್ಷೆ ಮಾಡದೆ ವಾಪಾಸ್ ಕಳುಹಿಸಿದ್ದು. ಮೇಲ್ನೋಟಕ್ಕೆ ಯಾವುದೋ ಪ್ರಾಣಿ ತಿಂದ ಹಾಗೆ ಕಾಣುತ್ತಿದೆ ಎಂದು ಪಶು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಪೊಲೀಸರು ಮತ್ತು ಪಶುವೈದ್ಯರ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.