ಹುಬ್ಬಳ್ಳಿ : ಪ್ರೇಯಸಿಯೊಂದಿಗೆ ಜಗಳ ಮಾಡಿಕೊಂಡ ಯುವಕನೊರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು. ಮೃತ ಯುವಕನನ್ನು 30 ವರ್ಷದ ಸಂದೇಶ್ ಯಾರ್ಕಡ್ ಎಂದು ಗುರುತಿಸಲಾಗಿದೆ.
ಹುಬ್ಬಳ್ಳಿಯ ನವನಗರದ ನಿವಾಸಿಯಾಗಿದ್ದ ಸಂದೇಶ್, ಹುಬ್ಬಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಆದರೆ ಇತ್ತೀಚೆಗೆ ಪ್ರೇಯಸಿಯೊಂದಿಗೆ ಜಗಳ ಮಾಡಿಕೊಂಡಿದ್ದ ಸಂದೇಶ್ ನಿನ್ನೆ ಏಕಾಏಕಿ ಉಣಕಲ್ ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ :ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣ : ಹಿಟ್ ಆ್ಯಂಡ್ ರನ್ ಕೇಸ್ ದಾಖಲಿಸಿದ ಕಾರು ಚಾಲಕ !
ಆದರೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಂದೇಶ್ ತನ್ನ ಪ್ರಿಯತಮೆಯೊಂದಿಗಿನ ಖಾಸಗಿ ವಿಡಿಯೋಗಳು, ಖಾಸಗಿ ಸಂಭಾಷಣೆ ಮತ್ತು ಖಾಸಗಿ ಪೋಟೊಗಳನ್ನು ತನ್ನ ಸ್ನೇಹಿತರಿಗೆ ಮತ್ತು ಸಾಮಾಜಿಕಮ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಪೊಲೀಸರಿಗೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು.
ಘಟನೆ ಸಂಬಂಧ ವಿಧ್ಯಾನಗರ ಪೊಲೀಸರು ಪ್ರಕರಣ ದಾಖಲಿಸಕೊಂಡು, ಮೃತ ಯುವಕನ ಸಾವಿನ ತನಿಖಾ ವಿಚಾರಣೆಯನ್ನು ಆರಂಭಿಸಿದ್ದಾರೆ.