Monday, January 13, 2025

ಚಾಮರಾಜಪೇಟೆಯಿಂದ ಹಿಂದೂಗಳನ್ನು ಓಡಿಸಲು ಷಡ್ಯಂತ್ರ ನಡೆಸಲಾಗುತ್ತಿದೆ : ಭಾಸ್ಕರ್​ ರಾವ್​

ಬೆಂಗಳೂರು : ಬಿಜೆಪಿ‌‌ ಕಚೇರಿಯಲ್ಲಿ ಮಾಜಿ ಐಪಿಎಸ್ ಆಧಿಕಾರಿ ಭಾಸ್ಕರ್ ರಾವ್ ಸುದ್ದಿಗೋಷ್ಟಿ ನಡೆಸಿದ್ದು. ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೂಯ್ದ ಪ್ರಕರಣದ ಕುರಿತು ಮಾತನಾಡಿದರು. ಈ ವೇಳೆ ಚಾಮರಾಜಪೇಟೆಯಲ್ಲಿ ಹಿಂದೂಗಳನ್ನು ಓಡಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿಯ ಕಚೇರಿಯ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಸ್ಕರ್​ ರಾವ್​ ‘ ಜಮೀರ್ ಅಹ್ಮದ್ ಬಾಲ‌ ಬಿಚ್ಚೋಕೆ ಕಾರಣ ಸಿದ್ದರಾಮಯ್ಯ. ಕಲ್ಲು ಎಸೆಯೋರು, ಬೆಂಕಿ ಹಚ್ಚೊ ಮುಸ್ಲಿಂ ಹುಡುಗರನ್ನ ರೆಡಿ ಮಾಡ್ತಾ ಇದ್ದಾರೆ. ಆದರೆ ಇದನೆಲ್ಲಾ ಮಾಡ್ತ ಇರೋದುಇ ಜಮೀರ್​ ಅಹ್ಮದ್​. ಅವರು ಹಿಂದೂ ವಿರೋಧಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಕೃತ್ಯಗಳನ್ನುಬಸವನಗುಡಿ ಬಿಟಿಎಂ ಜಯನಗರದಲ್ಲಿ ಮಾಡೋಕೆ ಆಗ್ತದಾ.? ಅದು ಕೇವಲ ಚಾಮರಾಜಪೇಟೆಯಲ್ಲಿ ಮಾಡೋಕೆ ಮಾತ್ರ ಸಾಧ್ಯ.

ನಾನು ಸಮುದಾಯದ ಬಗ್ಗೆ ಮಾತನಾಡುತ್ತಾ ಇಲ್ಲ, ಆ ಸಮುದಾಯದ ಲೀಡರ್ ಬಗ್ಗೆ ಮಾತಾಡ್ತಾ ಇದ್ದೇನೆ. ಆದರೆ ಈಗ ಬಂದನವಾಗಿರುವುದು ಬಿಹಾರಿ ಹುಚ್ಚ. ಅವನಿಗೆ ಇದಕ್ಕೂ ಸಂಬಂಧ ಇಲ್ಲ, ಅಮಾಯಕನನ್ನು ಕರೆದುಕೊಂಡು ಬಂದಿದ್ದಾರೆ. ಅಲ್ಲಿ ನಿರ್ಮಾಣ ಆಗುತ್ತಿರೋ ಆಸ್ಪತ್ರೆಯನ್ನು ಕಬ್ಜಗೆ ತೆಗೆದುಕೊಳ್ಳಬೇಕು ಎಂದು ಹೀಗೆಲ್ಲಾ ಮಾಡ್ತ ಇದ್ದಾರೆ.

ಇದನ್ನೂ ಓದಿ : ಆಸ್ಪತ್ರೆಯಲ್ಲಿ ಮಲಗಿದ್ದ ವ್ಯಕ್ತಿ ಸಾ*ವು : ಹುಟ್ಟಿದ ದಿನವೇ ತಂದೆಯನ್ನು ಕಳೆದುಕೊಂಡ ಮಗು !

ಈ ಕೃತ್ಯ ಎಸಗಿರುವವರ ವಿರುದ್ದ 153 ಅಡಿ ಕೇಸ್ ಹಾಕಿಲ್ಲ, ಇದು ಕಮ್ಯುನಲ್ ಆಕ್ಟ್ ಅಡಿ ಆಗಬೇಕಾದ ಕೇಸ್. ಇದರಲ್ಲಿ ಸಿದ್ದರಾಮಯ್ಯ ಮಾಡ್ತಾ ಇರೋದು ಸಿದ್ದರಾಮಯ್ಯ. ಕೂಡಲೇ ನಿಜವಾದ ಆರೋಪಿಯನ್ನು ಬಂದಿಸಿ ಕ್ರಮ ಕೈಗೊಳ್ಳಬೇಕು. ಸುಮ್ಮನೆ ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ಮುಂದೆ ಅನಾಹುತ ಆಗುತ್ತದೆ. ಅದಕ್ಕೆ ಸರ್ಕಾರ ಕಾರಣ ಆಗುತ್ತದೆ ಎಂದು ಹೇಳಿದರು.

ಹಿಂದೂಗಳನ್ನು ಓಡಿಸಲು ಷಡ್ಯಂತ್ರ ನಡೆಸಲಾಗುತ್ತಿದೆ !

ಮುಂದುವರಿದು ಮಾತನಾಡಿದ ಭಾಸ್ಕರ್​ ರಾವ್​ ‘ ದೇಶದಲ್ಲಿ ಎಲ್ಲಿಯೂ ಆಗದಿರುವ ಘಟನೆ ನಿನ್ನೆ ಚಾಮರಾಜಪೇಟೆಯಲ್ಲಿ ನಡೆದಿದೆ.  ಇದೊಂದು ಷಡ್ಯಂತ್ರವಾಗಿ. ಚಾಮರಾಜಪೇಟೆಯಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಹಿಂದೂಗಳನ್ನು ಓಡಿಸಲು ಈ ರೀತಿ ಮಾಡುತ್ತಿದ್ದಾರೆ.

ಸಚಿವ ಜಮೀರ್ ಮೂರು ಹಸು ಕೊಡಿಸ್ತಿನಿ ಅಂದಿದಾರೆ, ಅವರಿಗೆ ಹಸುವಿಗೆ ಈ ರೀತಿಯಾಗಿರುವ ಬಗ್ಗೆ ಯಾವುದೇ ಭಾವನೆ ಇಲ್ಲ. ಅದೇನು ಆಟದ ವಸ್ತುನಾ? ನಾವುಗಳು  ತಾಳ್ಮೆ ಇಂದ ಇರುವ ಕಾರಣಕ್ಕೆ ಇನ್ನು ರಕ್ತಪಾತವಾಗಿಲ್ಲ. ಇದು ರಾಜ್ಯ ಸರ್ಕಾರದ ಅದೃಷ್ಟ. ಈ ಭಾಗದಲ್ಲಿ ಸುಮಾರು 2227 ಹಸುಗಳಿವೆ. ಪಶು ಆಸ್ಪತ್ರೆಯನ್ನು ಡೆಮಾಲಿಷ್​ ಮಾಡಿ ಸ್ಕೂಲ್​ ಕಟ್ಟಲು ಹೊರಟ್ಟಿದ್ದಾರೆ. ಈ ಘಟನೆಗೆ ಜಮೀರ್​ ನೇರವಾದ ಕಾರಣ.

ಈ ಪ್ರಕರಣವನ್ನು ಮುಚ್ಚಿಹಾಕಲು ಬಿಹಾರ್ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಭಾಗದಲ್ಲಿ ವ್ಯಾಪಕವಾಗಿ ಡ್ರಗ್ಸ್​​ ದಂದೆ ನಡೆಯುತ್ತಿದೆ. ಇಲ್ಲಿರುವ  ಮುಸ್ಲಿಂ ಯುವಕರಿಗೆ ಕೆಲಸ ಕಾರ್ಯ ಇಲ್ಲ. ಜಮೀರ್​ ಮಾಡುತ್ತಿರುವ ಕೆಲಸವನ್ನು ಮುಸ್ಲಿಂ ಸಮುದಾಯವು ಮೆಚ್ಚೋದಿಲ್ಲ. ಹಸು ಸಾಕಿದವರನ್ನ ಓಡಿಸಲು, ಪಶು ಆಸ್ಪತ್ರೆ ಕಬಳಿಸಲು ಈ ತಂತ್ರ ಮಾಡಿದ್ದಾರೆ. ಇದಕ್ಕೆ ಪ್ರತಿಫಲವಾಗಿ ಸಾವಿರ ಗೋವನ್ನ ತಂದು ಕೊಟ್ಟರೂ ಮಾಡಿದ ಪಾಪ ತೊಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಜಮೀರ್​ ಮೇಲೆ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES