Tuesday, January 14, 2025

ಆಸ್ಪತ್ರೆ ಆವರಣದಲ್ಲಿ ಮಲಗಿದ್ದ ವ್ಯಕ್ತಿ ಸಾ*ವು : ಹುಟ್ಟಿದ ದಿನವೇ ತಂದೆಯನ್ನು ಕಳೆದುಕೊಂಡ ಮಗು !

ಮೈಸೂರು : ಗರ್ಭಿಣಿ ಹೆಂಡತಿಯ ಹೆರಿಗೆಗಾಗಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ವ್ಯಕ್ತಿಯೋರ್ವ ಆಸ್ಪತ್ರೆ ಆವರಣದಲ್ಲಿ ಸಾವನ್ನಪ್ಪಿದ್ದು. ಮೃತ ವ್ಯಕ್ತಿಯನ್ನು 47 ವರ್ಷದ ನಾಗೇಶ್​ ಎಂದು ಗುರುತಿಸಲಾಗಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಚೌಡಳ್ಳಿ ಗ್ರಾಮದ ನಾಗೇಶ್ ಹೆಂಡತಿಯ ಹೆರಿಗೆಗಾಗಿ ತನ್ನ ಪತ್ನಿಯನ್ನು ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದನು. ನಗರದ ಚೆಲುವಾಂಬ ಆಸ್ಪತ್ರೆಗೆ ಪತ್ನಿಯನ್ನು ದಾಖಲಿಸಿದ್ದನು. ರಾತ್ರಿ ಹೆಂಡತಿಗೆ ಹೆರಿಗೆಯಾಗಿ ಮಗವು ಜನಿಸಿತ್ತು.

ಇದನ್ನೂ ಓದಿ :ಸ್ನೇಹಿತನ ಕೊ*ಲೆ ಮಾಡಿ, ಶಿರಾಡಿಘಾಟ್​ ಪ್ರಪಾತಕ್ಕೆ ಎಸೆದ ಕೊ*ಲೆಗಡುಕರು ! 

ಆದರೆ ನಾಗೇಶ್​ ರಾತ್ರಿ 10:30ರ ಸುಮಾರಿಗೆ ನಿದ್ದೆಯ ಕಾರಣದಿಂದ ಆಸ್ಪತ್ರೆಯ ಮುಂಭಾಗದಲ್ಲಿ ಬಂದು ಮಲಗಿದ್ದನು. ಬೆಳಿಗ್ಗೆ 7 ಗಂಟೆಗೆ ಬಂದು ನೋಡಿದಾಗ ನಾಗೇಶ್​ ಮೃತಪಟ್ಟಿರುವು ತಿಳಿದು ಬಂದಿದೆ. ಹೃದಯಾಘಾತ ಅಥವ ಅತಿಯಾದ ಚಳಿಯಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು. ಮೃತದೇಹವನ್ನು ಶವಗಾರಕ್ಕೆ ರವಾನೆ ಮಾಡಲಾಗಿದೆ.

ಆದರೆ ದುರಾದರಷ್ಟವಶಾತ್​ ಹುಟ್ಟಿದ ಮಾರನೇ ದಿನಕ್ಕೆ ಮಗು ತನ್ನ ತಂದೆಯನ್ನು ಕಳೆದುಕೊಂಡಿದ್ದು. ಈ ಘಟನೆ ಎಲ್ಲಾರ ಕಣ್ಣಾಲಿಗಳಲ್ಲಿ ಕಣ್ಣೀರು ಒಸರುವಂತೆ ಮಾಡಿದೆ.

RELATED ARTICLES

Related Articles

TRENDING ARTICLES