Monday, January 13, 2025

ಸಂಕ್ರಾಂತಿ ಸ್ಪೆಷಲ್​ : ಹೂ-ಹಣ್ಣುಗಳ ಬೆಲೆಯಲ್ಲಿ ಭಾರಿ ಏರಿಕೆ !

ಬೆಂಗಳೂರು : ನಾಳೆ ಕ್ಯಾಲೇಂಡರ್​ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಿನ್ನಲೆ, ಜನರು ಹಬ್ಬದ ಖರೀದಿಯಲ್ಲಿ ಸಾಕಷ್ಟು ಬಿಸಿಯಾಗಿದ್ದಾರೆ. ಆದರೆ ಹಬ್ಬವನ್ನು ಗ್ರ್ಯಾಂಡ್​ ಆಗಿ ಆಚರಸಿಬೇಕು ಎಂದು ಪ್ಲಾನ್​ ರೂಪಿಸಿದ್ದ ಜನರಿಗೆ ಬೆಲೆ ಏರಿಕೆ ಶಾಕ್​ ನೀಡಿದ್ದು. ಇದರ ಕುರಿತಾದ ಒಂದು ವರದಿ ಕೆಳಗೆ ನೀಡಲಾಗಿದೆ.

ಹೌದು…ನಾಳೆ ಸುಗ್ಗಿ ಹಬ್ಬ ಸಂಕ್ರಾಂತಿ ಹಿನ್ನಲೆ ಕೆ.ಆರ್ ಮಾರ್ಕೆಟ್​ನಲ್ಲಿ ಹೂ, ಹಣ್ಣು, ಪೂಜೆ ಸಾಮಾಗ್ರಿ ಖರೀದಿ ಭರಾಟೆ ಜೋರಾಗಿದ್ದು. ಬೆಳ್ಳಂಬೆಳಿಗ್ಗೆ ಜನರು ಖರೀದಿಗೆ ಮುಂದಾಗಿದ್ದಾರೆ. ಸಾಮಾನ್ಯವಾಗಿ ಸಂಕ್ರಾಂತಿ ಎಂದರೆ ಅದು ರೈತರ ಹಬ್ಬವಾಗಿದ್ದು. ಈ ಹಬ್ಬದಲ್ಲಿ ಕಬ್ಬು, ಗೆಣಸು, ಅವರೆಕಾಯಿ, ಕಡಲೆಕಾಯಿಯನ್ನು ಹೆಚ್ಚಾಗಿ ಖರೀದಿ ಮಾಡಲಾಗುತ್ತದೆ. ಈ ವಸ್ತುಗಳು ವೈಜ್ಙನಿಕವಾಗಿಯೂ ಕೂಡ ಚಳಿಗಾಲದ ಅವದಿಯಲ್ಲಿ ಆರೋಗ್ಯಕ್ಕೆ ಹೆಚ್ಚು ಅನುಕೂಲಕರವಾಗಿರುತ್ತವೆ.

ಇದನ್ನೂ ಓದಿ : ನೈಋತ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ : ರಾಜಧಾನಿ ಸೇರಿದಂತೆ ಹಲವೆಡೆ ಮಳೆ ಸಾಧ್ಯತೆ !

ಆದರೆ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ಬೆಲೆಏರಿಕೆ ಶಾಕ್​ ಎದುರಾಗಿದ್ದು. ಹೂ, ಹಣ್ಣು, ಬಾಳೆ ಕಂಬ, ಕಬ್ಬಿನ ರೇಟು, ಸಾಮಾನ್ಯ ದಿನಕ್ಕಿತ ಎರಡು ಪಟ್ಟು ಹೆಚ್ಚಾಗಿದೆ. ಇದರ ನಡುವೆ ಲೋಡ್​ಗಟ್ಟಲೆ ಕಬ್ಬು ರಾಜ್ಯದ ವಿವಿದ ಜಿಲ್ಲೆಗಳಿಂದ ಬೆಂಗಳೂರಿಗೆ ಬರುತ್ತಿದೆ. ವ್ಯಾಪಾರಿಗಳು ಕೂಡ ಭಾರಿ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಏನಿದೆ ಹೂ-ಹಣ್ಣುಗಳ ದರ !

ಮಲ್ಲಿಗೆ ಹೂ – 800 ರಿಂದ 1500 ಕೆ.ಜಿ.
ಕನಕಂಬರ 1500 ರಿಂದ 2000 ಕೆ.ಜಿ
ಸಂಪಿಗೆ – 400 ರಿಂದ 600 ಕೆ.ಜಿ
ಕಬ್ಬು ಜೋಡಿಗೆ – 100 ರಿಂದ 120.
ಎಳ್ಳು ಬೆಲ್ಲ ಅರ್ಧ ಕೆ.ಜಿ.- 100
ಅವರೇ ಕಾಳು – 120 ರಿಂದ 150 ಕೆ.ಜಿ.
ತೆಂಗಿನಕಾಯಿ  1ಕ್ಕೆ 40-60

ಈ ರೀತಿಯಾಗಿ ಎಲ್ಲಾ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು. ಕಡಲೆಕಾಯಿ, ಗೆಣಸಿನ ದರವು ಗಗನಕ್ಕೆ ಏರುಮುಖವಾಗಿದೆ. ಆದರೆ ಇವೆಲ್ಲದರ ನಡುವೆಯು ಜನರ ಖರೀದಿಯ ಉತ್ಸಾಹದಲ್ಲಿ ಕಡಿಮೆಯಾಗಿಲ್ಲ.

RELATED ARTICLES

Related Articles

TRENDING ARTICLES