Monday, January 13, 2025

ಹಿಂದೂ ಎಂಬ ಪದವು ಅಪಮಾನಕರವಾದ ಶಬ್ಧವಾಗಿದೆ : ಪ್ರೋ.ಕೆ.ಎಸ್​ ಭಗವಾನ್​

ರಾಯಚೂರು : ಪ್ರೊ.ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದು. ಹಿಂದೂ ಎಂಬ ಪದವು ವಿವಾದಾತ್ಮಕ ಪದವಾಗಿದೆ ಎನ್ನುವ ಮೂಲಕ ವಿವಾದವನ್ನು ಹುಟ್ಟು ಹಾಕಿದ್ದಾರೆ.

ಹೌದು..ರಾಯಚೂರಿನ ದೇವದುರ್ಗದಲ್ಲಿ ಮಾತನಾಡಿದ ಪ್ರೊ.ಕೆ.ಎನ್​ ಭಗವಾನ್​ ‘ ಹಿಂದೂ ಎಂಬ ಪದವು ಅಪಮಾನಕರವಾದ ಶಬ್ಧವಾಗಿದೆ. ಹಿಂದೆ ಪರ್ಷಿಯನ್​ ಲೇಖಕ ಅಲ್ಬೆರೋನಿ ಸಿಂಧು ನದಿಯನ್ನು ಹಿಂದು ಎಂದು ವಿವರಿಸಿದ್ದಾನೆ. ನಂತರ ಅಕ್ಬರನ ಕಾಲದಲ್ಲಿ ಹಿಂದುಸ್ಥಾನ ಎಂಬ ಹೆಸರು ಬಂತು. ವೇದಾಪುರಾಣಗಳಲ್ಲಿ ಯಾವುದರಲ್ಲೂ ಹಿಂದೂ ಎಂಬ ಪದ ಇಲ್ಲ. ಈ ಬಗ್ಗೆ ಕಾಶ್ಮೀರ ಶೈವ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ :ಅಕ್ರಮ ಸಂಬಂಧದ ಆರೋಪ : ನಾಲ್ಕು ವರ್ಷದ ಮಗುವಿನೊಂದಿಗೆ ನೇಣಿಗೆ ಕೊರಳೊಡ್ಡಿದ ಮಹಿಳೆ !

ಯಾರು ಶೋಷಣೆಗೆ ಒಳಗಾಗಿದ್ದಾರೋ, ಯಾರು ಹೀನರಾಗಿದ್ದಾರೋ ಅವರು ಹಿಂದುಗಳು ಎಂದು ಹೇಳಲಾಗಿದೆ. ಹಿಂದು ಅನ್ನೋ ಶಬ್ದ ಬಹಳ ಅಪಮಾನಕಾರಿ ಶಬ್ದವಾಗಿದೆ. ಚಾತುರ್ವರ್ಣ ಧರ್ಮದಲ್ಲಿ ಶೂದ್ರರು ಎಂಬ ಪಾದ ಮನಸ್ಪೃರ್ತಿಯ ಪ್ರಕಾರ ಅವಮಾನಕ್ಕೆ ಒಳಗಾದ ಪದವಾಗಿ. ಶೂದ್ರ ಎಂದರೆ ಗುಲಾಮ ಎಂಬ ಅವಮಾನಕಾರಿ ಪದವಾಗಿದೆ. ಇಂತಹ ಜಾತಿಯನ್ನು, ಅವಮಾನಕರ ಪದಗಳನ್ನು ಜನರು ಬಿಡಬೇಕು ಎಂದು ಮನವಿ ಮಾಡಿದರು

ಬಾಬಾ ಸಾಹೇಬ್​ ಅಂಬೆಡ್ಕರ್ ನೀಡಿರುವ ಇಂತಹ ಸಂವಿದಾನವನ್ನು ಯಾರೂ ಕೂಡ ಬದಲಾಯಿಸಲು ಬಿಡಬಾರದು. ಜನರು ಇದರ ವಿರುದ್ದ ಧ್ವನಿ ಎತ್ತಬೇಕು ಎಂದು ಹೇಳಿದರು.

RELATED ARTICLES

Related Articles

TRENDING ARTICLES