ಚಿಕ್ಕೋಡಿ : ನಗರದಲ್ಲೊಂದು ಅಮಾನವೀಯ ಘಟನೆ ನಡೆದಿದ್ದು. ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿರೋ ಅಂಗನವಾಡಿ ಶಿಕ್ಷಕಿಗೆ ಕಿರಾತಕನೋರ್ವ ಲೈಂಗಿಕ ಕಿರುಕುಳ ನೀಡಿದ್ದಾನೆ. ಸುಮಾರು ಮೂರು ಭಾರಿ ಶಿಕ್ಷಕಿಯ ಮಾನಭಂಗ ಮಾಡಲು ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಘಟನೆ ನಡೆದಿದೆ. ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದೀಪಾ ಮಾನ್ಸಿ ಎಂಬಾಕೆಗೆ ಸಿದ್ರಾಯಿ ಕರ್ಲಟ್ಟಿ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದಾನೆ.
ಇದನ್ನೂ ಓದಿ : ಗವಿಮಠದ ಆವರಣದಲ್ಲಿ ಗಂಡನಿಂದ ಹೆಂಡತಿಯ ಭೀಕರ ಕೊ*ಲೆ !
ದೀಪಾ ಮಾನ್ಸಿ ಎಂಬಾಕೆ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಅದೇ ಅಂಗನವಾಡಿ ಆವರಣದಲ್ಲಿದ್ದ ಶಾಲೆಯಲ್ಲಿ ಸಿದ್ರಾಯಿ ಕರ್ಲಟ್ಟಿ ಪತ್ನಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ದೀಪಾ ಮಾನ್ಸಿ ಶಾಲೆಯ ಶಿಕ್ಷಕಿಗೆ ಅಂಗನವಾಡಿ ಶೌಚಾಲಯವನ್ನು ಅಡುಗೆ ಸಹಾಯಕಿಯಿಂದ ಸ್ವಚ್ಚಗೊಳಿಸುವಂತೆ ಸೂಚಿಸಿದ್ದಳು.
ಈ ಮಾತನ್ನು ಕೇಳಿಸಿಕೊಂಡಿದ್ದ ಸಿದ್ರಾಯಿ ಕರ್ಲಟ್ಟಿ ಪತ್ನಿ ಈ ವಿಷಯವನ್ನು ತನ್ನ ಪತಿಗೆ ತಿಳಿಸಿದ್ದಳು. ಇದರಿಂದ ಸಿಟ್ಟಿಗೆದ್ದಿದ್ದ ಸಿದ್ರಾಯಿ ಕರ್ಲಟ್ಟಿ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಲು ಆರಂಭ ಮಾಡಿದ್ದನು. ಶೌಚಾಲಯವನ್ನು ಸ್ವಚ್ಚಗೊಳಿಸುವ ವಿಚಾರಕ್ಕೆ ಇಬ್ಬರ ನಡುವೆ ಜಗಳವು ನಡೆದಿತ್ತು.
ಇದರಿಂದ ಸಿಟ್ಟಿಗೆದ್ದಿದ್ದ ಸಿದ್ರಾಯಿ ಕರ್ಲಟ್ಟಿ ಇದನ್ನೆ ಬಂಡವಾಳ ಮಾಡಿಕೊಂಡು ದೀಪಾ ಮಾನ್ಸಿ ಮೈಕೈ ಮುಟ್ಟಿ, ಆಕೆಯ ದೇಹದ ಭಾಗಗಳನ್ನು ಕೈಯಿಂದ ಸ್ಪರ್ಶಸಿ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಘಟನೆ ಸಂಬಂಧ ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.