Sunday, January 12, 2025

ಕೆಟ್ಟ ಸೂ**ರ ಕಣ್ಣು ತೆಗೆದು ಬಿಡವ್ವ : MLC ಸೂರಜ್​ ರೇವಣ್ಣ ದುರಂಹಕಾರಿ ಹೇಳಿಕೆ !

ಹಾಸನ : ಕೆಟ್ಟರು ಸಹ ಕೆಲವರಿಗೆ ಬುದ್ದಿ ಬರುವುದಿಲ್ಲ ಎಂಬುದಕ್ಕೆ MLC ಸೂರಜ್​ ರೇವಣ್ಣ ಮತ್ತು ಆತನ ಕುಟುಂಬವನ್ನು ಉದಾಹರಣೆಯಾಗಿ ನೀಡಬಹುದು. ಹೌದು ನಿನ್ನೆ ರಾತ್ರಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ ಸೂರಜ್​ ಮತ್ತೆ ಮಹಿಳೆಯರ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ಅಗ್ರಹಾರ ಗ್ರಾಮದಲ್ಲಿ ಆಯೋಜಿಸಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಸೂರಜ್ಜ ರೇವಣ್ಣ ‘ನಮ್ಮ ತಾತ ದೇವೇಗೌಡರು ಹೇಳುತ್ತಿದ್ದರು
ಹಾಸನದಲ್ಲಿ ಯಾವುದೇ ಪಕ್ಷ ಇಲ್ಲ, ಇರುವುದು ಎರಡೇ ಪಕ್ಷ, ಒಂದು ದೇವೇಗೌಡರ ಪರ, ಇನ್ನೊಂದು ದೇವೇಗೌಡರ ವಿರುದ್ಧ, ಈಗ ಅದು ನನಗೆ ಅನುಭವ ಆಗುತ್ತಿದೆ, ನನಗ ತುಂಬಾ ಹುಷಾರಿಲ್ಲ, ದೃಷ್ಟಿಯಾಗಿತ್ತು, ಅದಕ್ಕೆ ದೃಷ್ಟಿ ತೆಗೆಸಿದರು, ದೃಷ್ಟಿ ತೆಗೆಯುವಾಗ ನಾಯಿಕಣ್ಣು, ನರಿ ಕಣ್ಣು, ಕೆಟ್ಟ ಮುಂಡೆಯರ ಕಣ್ಣು ಅಂತ ಹೇಳುತ್ತಾ ದೃಷ್ಟಿ ತೆಗೆದರು. ಆಗ ನಾನು ಮನಸ್ಸಿನಲ್ಲಿ ಅನ್ಕೊಂಡೆ ಕೆಟ್ಟ ಸೂ*ಯರ ಕಣ್ಣು ಅಂತ ಏಕೆ ಹೇಳಲಿಲ್ಲ ಅಂತ, ಅದಕ್ಕೆ ನಾನು ಕೆಟ್ಟ ಸೂ*ಯರ ಕಣ್ಣು ತೆಗೆದು ಬಿಡವ್ವ ಅಂತ ಹೇಳ್ದೆ’ ಎಂದು ಬಹಿರಂಗವಾಗಿ ತಮ್ಮ ಸ್ತ್ರೀ ದ್ವೇಶಿತನವನ್ನು ಪ್ರದರ್ಶಿಸಿದರು.

ಇದನ್ನೂ ಓದಿ :ಕಾಮಧೇನುವಿನ ಕೆಚ್ಚಲು ಕೊಯ್ದ ದುರುಳರು : ಸಂಸದ ಪಿ.ಸಿ ಮೋಹನ್​ ಸೇರಿದಂತೆ ಹಲವರಿಂದ ಆಕ್ರೋಶ !

ಮುಂದುವರಿದು ಮಾತನಾಡಿದ ಸೂರಜ್​ ರೇವಣ್ಣ ‘ ನಾನು ನಿನ್ನೆ, ಮೊನ್ನೆ ಪೆನ್‌ಡ್ರೈವ್ ಹಂಚಿ ಎಂಎಲ್‌ಸಿ ಆಗಿಲ್ಲ, ಯಾವುದೇ ಇಲಾಖೆಯಲ್ಲಿ ನಮ್ಮ ಕಾರ್ಯಕರ್ತರಿಗೆ ತೊಂದರೆ ನನ್ನ ಗಮನಕ್ಕೆ ತನ್ನಿ, ಯಾರು ಬರ್ತಾರೋ, ಬಿಡ್ತಾರೋ ಈ ಸೂರಜ್‌ರೇವಣ್ಣ ಬರ್ತಾನೆ. ಕಳೆದ ಚುನಾವಣೆಯಲ್ಲಿ ಜಾತಿ ಎಂಬ ವಿಷ ಬೀಜ ಭಿತ್ತಿ ಮತ ಪಡೆದಿದ್ದಾರೆ. ಜೆಡಿಎಸ್​ ಮುಖಂಡರೆ ಬೇರೆಯವರಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದರು.

 

RELATED ARTICLES

Related Articles

TRENDING ARTICLES