Friday, January 10, 2025

ನನ್ನ ಮೇಲೂ ವಾಮಾಚಾರ ನಡೆದಿದೆ, ಆದರೆ ಇದರ ಮೇಲೆ ನನಗೆ ನಂಬಿಕೆ ಇಲ್ಲ: ಕೆ.ಎನ್​ ರಾಜಣ್ಣ

ಬೆಂಗಳೂರು : ಡಿ.ಕೆ ಶಿವಕುಮಾರ್​ ತಮಿಳುನಾಡಿನ ಪ್ರತ್ಯಂಗೀರ ದೇವಾಲಯಕ್ಕೆ ಭೇಟಿ ನೀಡಿದ ವಿಚಾರವಾಗಿ ಮಾತನಾಡಿದ ಸಚಿವ ಕೆ.ಎನ್​ ರಾಜಣ್ಣ ‘ ನನಗೆ ಪೂಜೆ, ಪುನಸ್ಕಾರ, ವಾಮಚಾರದ ಬಗ್ಗೆ ನಂಬಿಕೆ ಇಲ್ಲ,
ಅಸಹಾಯಕರಿಗೆ ಒಳ್ಳೆಯದು ಮಾಡಿದ್ರೆ ಅದೇ ಒಳ್ಳೆಯದು, ಯಾರೋ ಒಬ್ಬ ಅಸಹಾಯಕನಿಗೆ ತೊಂದರೆ ನೀಡಿದರೆ ಶಾಪ ಹಾಕುತ್ತಾನೆ, ಅದೇ ನಮಗೆ ಕೆಟ್ಟದಾಗುತ್ತೆ,

‘ಈ ಹಿಂದೆ ನನ್ನ ವಿರುದ್ಧ ಮಾಟ, ವಾಮಚಾರದ ಪ್ರಯೋಗ ನಡೆದಿತ್ತು, ಆ ಅನುಭವ ನನಗೆ ಆಗಿದೆ ಆದರೆ
ನಾನು ಯಾರಿಗೂ ಹೆದರಿಸೋನು ಅಲ್ಲ, ಡಿಕೆಶಿ ಹಣೆಯಲ್ಲಿ ಬರೆದಿದ್ದರೆ ಸಿಎಂ ಆಗುತ್ತಾರೆ ಎಂಬ ಹೇಳಿಕೆಗೆ ಉತ್ತರಿಸಿದ ರಾಜಣ್ಣ ‘ ಅವರು ಸಿಎಂ ಆಗೇ ಬಿಡ್ತಾರೆ ಅಂತನೂ ಹೇಳಿಲ್ಲ, ಆಗಲ್ಲ ಅಂತಾನೂ ಹೇಳಿಲ್ಲ
ಅವರ ಹಣೆಯಲ್ಲಿ ಬರೆದಿದ್ದರೆ ಆಗ್ತಾರೆ ಎಂದಿದ್ದಾರೆ. ಹಣೆಯಲ್ಲಿ ಬರೆದಿದ್ದರೆ ಅದರ ತೀರ್ಮಾನ ಆಗುತ್ತದೆ ಎಂದು ಹೇಳಿದರು.

ದೇಶದ 90ರಷ್ಟು ರಾಜಕಾರಣಿಗಳು ಭ್ರಷ್ಟರೆ ಎಂದ ರಾಜಣ್ಣ !

ಕೇಂದ್ರ ಸಚಿವ ಕುಮಾರಸ್ವಾಮಿ ಕಾಂಗ್ರೆಸ್​ ಸರ್ಕಾರದಲ್ಲಿ ರೇಟ್ ಕಾರ್ಡ್ ಫಿಕ್ಸ್ ಆಗಿದೆ ಎಂಬ ವಿಚಾರದ ಕುರಿತು ಮಾತನಾಡಿದ ರಾಜಣ್ಣ ‘ ಅವರ ಕಾಲದಲ್ಲೂ ರೇಟ್​ ಕಾರ್ಡ್​ ಎಷ್ಟಿತ್ತು ಎಂದು ಹೇಳಬೇಕು, ಒಂದು ತಿಳ್ಕೊಳ್ಳಿ ಈ ದೇಶದಲ್ಲಿ ೯೦% ರಾಜಕಾರಣಿಗಳು ಭ್ರಷ್ಟರೇ ಆಗಿದ್ದಾರೆ. ರಾಜಕಾರಣಿಗಳೇನು ಮನೆಯಿಂದ ದುಡ್ಡು ತಂದು ಕೊಡಲ್ಲ. ಅವರು ಬೇರೆಯವರ ಹತ್ತಿರ ತಗೊಂಡೇ ಕೊಡಬೇಕು ಎಂದು ಹೇಳಿದರು.

ನಾವು ಚುನಾವಣೆಗೆ ಖರ್ಚು ಮಾಡುವ ಹಣ ಎಷ್ಟು ಅಂತ ನಿಮಗೆ ಗೊತ್ತಿಲ್ಲ, ಅದರ ಬಗ್ಗೆ ಯಾರು ನಿಜ ಹೇಳಲ್ಲ, ನಾವು ಖರ್ಚು ಮಾಡುವ ಹಣವನ್ನು ಬೇರೆಯವರಿಂದ ಪಡೆದು ಕೊಡುತ್ತೇವೆ. ಇವತ್ತು ಸತ್ಯ ಹೇಳಿದರೆ, ಅದೇ ದೊಡ್ಡ ವಿಷಯ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಣೆಯಲ್ಲಿ ಬರೆದಿದ್ದರೆ ಸಿಗುತ್ತೆ !

ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂಬ ವಿಚಾರದ ಕುರಿತು ಮಾತನಾಡಿದ ರಾಜಣ್ಣ ‘ಪಕ್ಷದ ಅಧ್ಯಕ್ಷ ಸ್ಥಾನ ಸಿಗಬೇಕು ಎಂದು ನನ್ನ ಹಣೆಯಲ್ಲಿ ಬರೆದಿದ್ರೆ ಸಿಗುತ್ತೆ, ನಮಗೆ ಬರೋದು ಬರುತ್ತೆ, ಹೋಗೋದು ಹೋಗುತ್ತೆ. ಆದರೆಮ ನಾನು ನಾನು ಅಧಿಕಾರಕ್ಕೆ ಅಂಟಿ ಕೊಂಡು ಕುಳಿತವನಲ್ಲ. ನನಗೆ ರಾಜೀನಾಮೆ ಕೊಡು ಅಂದ್ರೆ ಮಂತ್ರಿಗಿರಿಗೂ ರಾಜಿನಾಮೇ ಕೊಡ್ತೇನೆ. ನಾನು ಮುಂದೆ ಚುನಾವಣೆಗೆ ನಿಲ್ಲಲ್ಲ, ಇನ್ನ ಸಿಎಂ ಆಗೋ ಅವಕಾಶ ಎಲ್ಲಿ ಬರುತ್ತೆ. ದೇವೆಗೌಡರ ಪ್ರಧಾನಿ ಆದಂಗೆ ಆಗ್ತೇನೆ, ಮುಂದಿನ ಚುನಾವಣೇಯಲ್ಲಿ ನಾನು ಸ್ಪರ್ಧೆ ಮಾಡಲ್ಲ, ಇನ್ನೇಲ್ಲಿ ಸಿಎಂ ಕನಸು ಕಾಣೋದು ಎಮದು ಹೇಳಿದರು.

ಮುಂದುವರಿದು ಮಾತನಾಡಿದ ರಾಜಣ್ಣ ‘ಡಿಕೆಶಿ ನಡೆಸಿರುವ ಪೂಜೆ ಪುನಸ್ಕಾರಗಳಲ್ಲಿ ನನಗೆ ನಂಬಿಕೆ ಇಲ್ಲ
ನನ್ನ ಮೇಲೂ ವಾಮಾಚಾರಗಳು ನಡೆದಿದ್ವು, ಆದರೆ ನಾನು ಅದರ ಮೇಲೆ ನನಗೆ ನಂಬಿಕೆ ಇಲ್ಲ, ನಾವು ಯಾರಿಗಾದರೂ ಸಹಾಯ ಮಾಡಿದರೆ ಅದು ನಮಗೆ ವರ, ನಾವು ಬೇರೆಯವರಿಗೆ ಕೆಟ್ಟದು ಮಾಡಿದರೆ ಅದು ಶಾಪ.

ತಿರುಪತಿಗೆ ಹೋಗಿದ್ ಭಕ್ತರು ಅಲ್ಲಿ ಯಾಕೆ ಸತ್ತರು, ಅಲ್ಲಿಗೆ ಹೋದವರು ಧೈವ ಭಕ್ತರಲ್ಲವೇ, ವಾಮಾಚಾರ, ದೇವರ ವರ,ಶಾಪ ನಾವು ಸೃಷ್ಟಿಮಾಡಿದ್ದು, ನಾವು ದಿನವೂ ಪಡೆಯುತ್ತೇವೆ, ನಮ್ಮ ಪಕ್ಷದ ಅಧ್ಯಕ್ಷರಿಗೆ ನಂಬಿಕೆ ಇದೆ ಅದಕ್ಕೆ ಅವರು ಯಾಗ ಮಾಡಿಸಿದ್ದಾರೆ. ಶತೃಸಂಹಾರ ಯಾಗ ಮಾಡಿರಬಹುದು, ಆದರೆ ದೇವರು ವರ ಕೊಡುವಂತಿದ್ದರೆ . ಎಲ್ಲರು ಹೋಗಿ ಮಾಡಿಸುತ್ತಿದ್ದರು.

RELATED ARTICLES

Related Articles

TRENDING ARTICLES