Friday, January 10, 2025

ಟ್ರ್ಯಾಕ್ಟರ್​ ಮತ್ತು ಕಾರ್​ ನಡುವೆ ಮುಖಾಮುಖಿ ಡಿಕ್ಕಿ : ಕಾರ್ ಚಾಲಕ ಸಾ*ವು !

ಬಾಗಲಕೋಟೆ : ಕಾರ್​ ಮತ್ತು ಟ್ರ್ಯಾಕ್ಟರ್​ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರ್​​ ಚಾಲಕ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು. ಮೃತ ಚಾಲಕನನ್ನು ಸುನೀಲ್​ ಮಾಸರೆಡ್ಡಿ ಎಂದು ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ.

ಬಾಗಲಕೋಟೆಯ ಜೀರಗಾಳ ಗ್ರಾಮದ ಹೊರವಲಯದಲ್ಲಿ ಮಧ್ಯರಾತ್ರಿ ಘಟನೆ ನಡೆದಿದ್ದು. ಟ್ರ್ಯಾಕ್ಟರ್​ ಮತ್ತು ಕಾರ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರ್​ ಚಾಲಕ 36 ವರ್ಷದ ಸುನೀಲ್​ ಮಾಸರೆಡ್ಡಿ ಎಂಬಾತ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ : ಅನ್ನ ಹಾಕಿದ ಮನೆಗೆ ಕನ್ನ: ಪೆಟ್ರೋಲ್​ ಬಂಕ್​ನಲ್ಲಿ ಕ್ಯೂಆರ್​​ ಕೋಡ್​ ಅಂಟಿಸಿ 58 ಲಕ್ಷ ವಂಚಿಸಿದ ಭೂಪ

ದುರ್ಘಟನೆಯಲ್ಲಿ ಸಂಪೂರ್ಣ ಕಾರು ನಜ್ಜುಗುಜ್ಜಾಗಿದ್ದು. ಕಬ್ಬು ತುಂಬಿದ್ದ ಟ್ರ್ಯಾಕ್ಟರ್​ನ ಟ್ರ್ಯಾಲಿ ಪಲ್ಟಿಯಾಗಿದೆ. ಮುಧೋಳ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES