Friday, January 10, 2025

ಅನ್ನ ಹಾಕಿದ ಮನೆಗೆ ಕನ್ನ: ಪೆಟ್ರೋಲ್​ ಬಂಕ್​ನಲ್ಲಿ ಕ್ಯೂಆರ್​​ ಕೋಡ್​ ಅಂಟಿಸಿ 58 ಲಕ್ಷ ವಂಚಿಸಿದ ಭೂಪ

ಮಂಗಳೂರು : ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯಿಂದಲೇ ಭಾರೀ ವಂಚನೆ ನಡೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು. ಹಣ ವರ್ಗಾವಣೆ ಮಾಡಲು ಇರಿಸಿದ್ದ ಆನ್​ಲೈನ್ ಕ್ಯೂಆರ್​ ಕೋಡ್​ ಜಾಗದಲ್ಲಿ ತನ್ನ ಕ್ಯೂಆರ್​ ಕೋಡ್​ ಅಂಟಿಸಿದ್ದ ಪೆಟ್ರೋಲ್​ ಬಂಕ್​ ಸಿಬ್ಬಂದಿಗಳು 58 ಲಕ್ಷ ರೂಪಾಯಿ ಹಣವನ್ನು ವಂಚಿಸಿದ್ದಾನೆ.

ಮಂಗಳೂರಿನ ಬಂಗ್ರಕೂಳೂರಿನ ರಿಯಲನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್‌ನಲ್ಲಿ ಘಟನೆ ನಡೆದಿದ್ದು. ಕಳೆದ 15 ವರ್ಷದಿಂದ ಪೆಟ್ರೋಲ್ ಬಂಕ್​ನಲ್ಲಿ ಸೂಪರ್ ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೋಹನದಾಸ್ ಎಂಬಾತನಿಂದ ಕೃತ್ಯ ನಡೆದಿದೆ.

ಇದನ್ನೂ ಓದಿ : ದರ್ಶನ್​ ನೋಡಿ ಭಾವುಕಳಾದ ಪವಿತ್ರಾ : ಫೆ.25ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ !

ಆರೋಪಿ ಮೋಹನ್​ ದಾಸ್​ ಪೆಟ್ರೋಲ್​ ಬಂಕ್​ನಲ್ಲಿದ್ದ ಕ್ಯೂಆರ್​ ಕೋಡ್​ನ್ನು ಬದಲಿಸಿ ತನ್ನ ಬ್ಯಾಂಕ್​ ಖಾತೆಯ ಕ್ಯೂಆರ್​ ಕೋಡ್​ ಅಂಟಿಸಿದ್ದನು. 23 ಮಾರ್ಚ್ 1 ರಿಂದ 2023 ಜುಲೈ 31ರವರೆಗೆ ಕ್ಯೂಆರ್ ಕೋಡ್​ ಅಂಟಿಸಿದ್ದ ಆರೋಪಿ ಸುಮಾರು 58 ಲಕ್ಷ ರೂ ಹಣವನ್ನು ವಂಚಿಸಿದ್ದ. ಇದೀಗ ಆರೋಪಿಯ ಕುರಿತು ಪೆಟ್ರೋಲ್ ಬಂಕ್​ನ ಮ್ಯಾನೇಜರ್​ ಮ್ಯಾಥ್ಯೂ ಎಂಬುವವರಿಂದ ಮಂಗಳೂರು ಸಿಯಎನ್​ ಪೊಲೀಸ್ ಠಾಣೆಗೆ ದೂರು ನೀಡಿದ್ದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES