ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ಎಂದು ದರ್ಶನ್ ಮತ್ತು ಗ್ಯಾಂಗ್ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. 6 ತಿಂಗಳ ನಂತರ ದರ್ಶನ್ ಮತ್ತು ಪವಿತ್ರಾ ಮುಖಾಮುಖಿಯಾಗಿದ್ದು. ದರ್ಶನ್ರನ್ನು ನೋಡಿದ ಪವಿತ್ರ ಭಾವುಕಳಾಗಿದ್ದಾಳೆ ಎಂದು ತಿಳಿದು ಬಂದಿದೆ, ಮುಂದಿನ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಲಾಗಿದೆ.
ದರ್ಶನ್ & ಗ್ಯಾಂಗ್ ಇಂದು ಕೊಲೆ ಪ್ರಕರಣದ ವಿಚಾರಣೆಗೆ 57ನೇ CCH ಕೋರ್ಟ್ಗೆ ಹಾಜರಾಗಿದ್ದರು. ಎಲ್ಲಾ 17 ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ವಿಚಾರಣೆ ಆರಂಭಿಸಿದ ನ್ಯಾಯಾಲಯ ಎಲ್ಲಾ ಆರೋಪಿಗಳಿಗೆ ಮುಂದಿನ ವಿಚಾರಣೆಗಳಿಗೆ ಹಾಜರಾಗಬೇಕು ಎಂದು ತಾಕೀತು ಮಾಡಿ ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಲಾಗಿದೆ ಎಂದು ಮಾಹಿತಿ ದೊರೆತಿದೆ.
ಇದನ್ನೂ ಒದಿ : ರಸ್ತೆ ದಾಟುತ್ತಿದ್ದ ಜಿಂಕೆ ಕಾರ್ ಡಿಕ್ಕಿಯಾಗಿ ಸಾ*ವು : ಆರೋಪಿಯನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು !
ಈ ವೇಳೆ ಸುಬ್ಬನನ್ನು ನೋಡಿದ ಸುಬ್ಬಿ ಕಣ್ಣೀರಾಕಿದ್ದಾರೆ. ಜೊತೆಗೆ ದರ್ಶನ್ ನ್ಯಾಯಾಲಯಕ್ಕೆ ಹಾಜರಾಗುವ ವೇಳೆ ಅಪಾರ ಪ್ರಮಾಣದ ಅಭಿಮಾನಿಗಳು ನ್ಯಾಯಾಲಯದ ಬಳಿ ಹಾಜರಿದ್ದರು. ಈ ವೇಳೆ ಕೆಲ ಅಭಿಮಾನಿಗಳಿಗೆ ದರ್ಶನ್ ಕೈ ನೀಡಿದರು.